Select Page

Advertisement

ಚಿಕ್ಕೋಡಿ : ಭೀಕರ ರಸ್ತೆ ಅಪಘಾತ ಮುಧೋಳದ ಇಬ್ಬರು ಸಾವು

ಚಿಕ್ಕೋಡಿ : ಭೀಕರ ರಸ್ತೆ ಅಪಘಾತ ಮುಧೋಳದ ಇಬ್ಬರು ಸಾವು

ಚಿಕ್ಕೋಡಿ : ಗೂಡ್ಸ್ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಹಿನ್ನಲೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನುಳಿದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ತಾಲೂಕಿನ ನಿಪ್ಪಾಣಿ – ಮುಧೋಳ ರಸ್ತೆಯ ಬೆಳಕುಡ ಗೇಟ್ ಶುಕ್ರವಾರ ತಡರಾತ್ರಿ ಸಾಮಭವಿಸಿದ ಅಪಘಾತದಲ್ಲಿ ಬಾಗಲಕೋಟೆಯ ಮುಧೋಳದ ರಾಕೇಶ ವಾಡೆಕರ ( 25) ಸೌರಭ ( 19) ಸಾವನ್ನಪ್ಪಿದ್ದಾರೆ.

ಆನಂದ ಘಾಟಕೆ(29) ವಿಕಾಸ ಬೀಳಗಿ (19) ಗಂಭೀರವಾಗಿ ಗಾಯಗೊಂಡರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಆಟೊ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು ಹಿರೇಬಾಗೇವಾಡಿ ಗ್ರಾಮದ ಅಮಿನ್ ಯರಗಟ್ಟಿ ( 45 ) ಸ್ಥಾಲದಲ್ಲೇ ಮೃತಪಟ್ಟಿದ್ದಾನೆ.‌ ಶನಿವಾರ ಘಟನೆ ಸಂಭವಿಸಿದ್ದು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!