Select Page

ಕಳ್ಳನ‌ ಹೆಡೆಮುರಿ ಕಟ್ಟಿದ ಬೆಳಗಾವಿ ನಗರ ಪೊಲೀಸ್

ಕಳ್ಳನ‌ ಹೆಡೆಮುರಿ ಕಟ್ಟಿದ ಬೆಳಗಾವಿ ನಗರ ಪೊಲೀಸ್

ಬೆಳಗಾವಿ : ನಗರದಲ್ಲಿ ಇತ್ತೀಚಿಗೆ ನಡೆಯುತ್ತಿದ್ದ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಲಾಗಿದೆ.

ನಗರದ ಮಾಳ ಮಾರುತಿ ಪೊಲೀಸ್ ಠಾಣೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಅಂತರ್ ರಾಜ್ಯ ಕಳ್ಳ ನಾಗರಾಜ್ ಸುಭಾಷ್ ಕಚೇರಿ, ಗುಲ್ಬರ್ಗ ಹಾಗೂ ನವೀನ್ ಗರಕುಲ ಕುಂಬಾರಿ ಸೋಲಾಪುರ್ ಇಬ್ಬರನ್ನು ಬಂಧಿಲಸಾಗಿದೆ.

ನವೀನ್ ಗರಕುಲ ಕುಂಬಾರಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇವನು ತನ್ನ ಗೆಳೆಯರೊಂದಿಗೆ XUV 500 ಐಷಾರಾಮಿ ಕಾರಿನ ಮೇಲೆ PRESS ಎಂದು ಬರೆಯಿಸಿ, ಅದರಲ್ಲಿ ಬಂದು ಮಹಾಂತೇಶ್ ನಗರ ಆಂಜನೇಯ ನಗರ ಮತ್ತು ಶಿವಬಸವ ನಗರಗಳಲ್ಲಿ ಕಳ್ಳತನ ಮಾಡಿಕೊಂಡು ಹೋಗುದ್ದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿತನಿಂದ 10 ಲಕ್ಷ ಮೌಲ್ಯದ ಬಂಗಾರ ಹಾಗೂ ಸುಮಾರು 10 ಲಕ್ಷದ xuv ಕಾರು ಹೀಗೆ ಒಟ್ಟು 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಇನ್ನುಳಿದ ಮೂವರು ಆರೋಪಿಗಳಾದ ಹುಸೇನ್ / ಸಾಗರ್ ಗಾಯಕ್ವಾಡ್, ಅಮುಲ್ ಹಾಗೂ ಕೇತ್ಯಾ ಎಂಬುವವರು ಪರಾರಿಯಾಗಿದ್ದು, ವಿಶೇಷ ತಂಡವನ್ನು ರಚಿಸಿ ಅವರ ಪತ್ತೆ ಕಾರ್ಯಾಚರನೆ ಮುಂದುವರಿಸಲಾಗಿದೆ.

ಅಂತರ್ ರಾಜ್ಯ ಕಳ್ಳರ ಬಂಧನದಲ್ಲಿ ಶ್ರಮಿಸಿದ ಮಾರ್ಕೆಟ ವಿಭಾಗದ ಎಸಿಪಿ ಸೋಮೇಗೌಡ ಯು. ಜಿ. ರವರ ಮಾರ್ಗದರ್ಶನದಲ್ಲಿ ಜಯಂ ಕಾಲಿ ಮಿರ್ಚಿ ಪಿ ಐ ಇವರ ನೇತೃತ್ವದ ತಂಡ ಶ್ರೀ ಹೊನ್ನಪ್ಪ ತಳವಾರ್ ಪಿಎಸ್ಐ ಶ್ರೀಶೈಲ್ ಹುಳಗೇರಿ ಪಿಎಸ್ಐ ಮತ್ತು ಸಿಬ್ಬಂದಿ ಎಂ ಜಿ ಕುರೇರ್, ಚಿನ್ನಪ್ಪಗೋಳ, ಬಸು ಬಸ್ತ, ಚಂದ್ರು ಚಿಗರಿ ಕೆ.ಬಿ. ಗೌರಾನಿ,

ಹೊಸಮನಿ, ರವಿ ಬಾರಿಕರ್, ಮುಜಾವರ, ಶಿವಾಜಿ ಚೌಹಾನ, ಮಾರುತಿ ಮಾದರ, ಮಲ್ಲಿಕಾರ್ಜುನ್ ಗಾಡವಿ, ಜಗನ್ನಾಥ ಭೋಸ್ಲೆ, ಬಸವರಾಜ ಕಲ್ಲಪ್ಪನವರ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ್ ಅಕ್ಕಿ ಹಾಗೂ ಮಹಾದೇವ ಕಾಶಿದ ರವರ ತಂಡವನ್ನು ಶ್ರೀ ಯೆಡಾ ಮಾಟಿನ್ ಮಾರ್ಬನ್ಯಾಂಗ್ ಐಪಿಎಸ್ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಪ್ರಶಂಸಿಸಿರುತ್ತಾರೆ.

Advertisement

Leave a reply

Your email address will not be published. Required fields are marked *

error: Content is protected !!