ಬಿಗ್ ಬಾಸ್ ನರಕ ಮನೆ ಧ್ವಂಸಗೊಳಿಸಿದ ಆಯೋಜಕರು
ಬೆಂಗಳೂರು : ಈ ಬಾರಿಯ ಬಿಗ್ ಬಾಸ್ ನಲ್ಲಿ ಸ್ವರ್ಗ ಹಾಗೂ ನರಕ ಎಂಬ ವಿಭಿನ್ನ ಆಟ ಪರಿಚಯಿಸಲಾಗಿತ್ತು. ಆದರೆ ಎರಡನೇ ವಾರಕ್ಕೆ ಇದು ಮುಕ್ತಾಯಗೊಂಡಿದ್ದು ಬಿಗ್ ಬಾಸ್ ನ ನರಕ ಮನೆಯನ್ನು ಧ್ವಂಸ ಮಾಡಲಾಗಿದೆ.
ಬಿಗ್ ಬಾಸ್ ನ ನರಕ ಮನೆಗೆ ಕೆಲವರು ನೇರವಾಗಿ ನಾಮಿನೇಟ್ ಆದರೆ ಇನ್ನೂ ಕೆಲವರನ್ನು ಸ್ವರ್ಗ ನಿವಾಸಿಗಳು ಆಯ್ಕೆ ಮಾಡಿದ್ದರು. ಊಟ ಸೇರಿದಂತೆ ಸ್ವರ್ಗ ನಿವಾಸಿಗಳಿಗೆ ಸಿಗುವ ಸೌಲಭ್ಯ ನರಕ ವಾಸಿಗಳಿಗೆ ನೀಡಲಾಗುತ್ತಿರಲಿಲ್ಲ. ಆದರೆ ಆಟದ ವಿಚಾರಕ್ಕೆ ಬಂದರೆ ನರಕ ವಾಸಿಗಳು ಉತ್ತಮ ಆಟ ಆಡಿದ್ದರು.
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ವಿವಿಧ ರೀತಿಯ ಆಟಗಳ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳುವ ಒಂದು ಬಗೆ. ಆದರೆ ಕೆಲವು ವಿಚಾರಗಳನ್ನು ಹೊರಗಿನ ಜನ ಹೇಗೆ ನೋಡುತ್ತಾರೆ ಎಂಬುದರ ಮೇಲೆ ಇದು ನಿರ್ಧಾರವಾಗಿರುತ್ತದೆ. ಆದರೆ ಎರಡೇ ವಾರದಲ್ಲಿ ಆಟದ ಸ್ವರೂಪ ಬದಲಾಗಲು ಏನು ಕಾರಣ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಇನ್ನೂ ಈ ನರಕ ಎಂಬ ಆಟದ ವಿಧಕ್ಕೆ ಹೊರಗಿನಿಂದಲೂ ವಿರೋಧ ವ್ಯಕ್ತವಾಗಿತ್ತು. ಆಯ್ಕೆಯಲ್ಲಿ ಎಡವಲಾಗಿದೆ ಎಂದು ಕೆಲವರು ಆಡಿ ಕೊಳ್ಳುತ್ತಿದ್ದರು. ಆದರೆ ಕೊನೆಗೆ ಬಿಗ್ ಬಾಸ್ ಮನೆಯ ಸ್ವರೂಪವನೇ ಬದಲಿಸಿದ್ದು ವಿಶೇಷ.
Big Boss Kannada 11


