ಅಕ್ರಮ ಅಕ್ಕಿ ಹಗರಣಕ್ಕೆ ಪತ್ರಕರ್ತ ಬಲಿ
ಬಾಗಲಕೋಟೆ : ಭೀಕರ ರಸ್ತೆ ಅಪಘಾತದಲ್ಲಿ ಸಾವಣಪ್ಪಿದ್ದ ಪತ್ರಕರ್ತ ಬಸವರಾಜ ಕಾನಗೊಂಡ ಪ್ರಕರಣದ ಹಿಂದೆ ಅಕ್ರಮ ಅಕ್ಕಿ ಹಗರಣ ಬೆಳಕಿಗೆ ಬಂದಿದೆ.
ಅಕ್ಟೋಬರ್ 8 ರಂದು ಜಿಲ್ಲೆಯ ಜಮಖಂಡಿ ತಾಲೂಕಿನ ಮದರಖಂಡಿ ಕ್ರಾಸ್ ಬಳಿ ಪತ್ರಕರ್ತ ಬಸವರಾಜ ಕಾನಗೊಂಡ ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಕುರಿತು ಮೃತರ ಪತ್ನಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಇದರ ಹಿಂದೆ ಕರಾಳ ಅಕ್ಕಿ ಸಾಗಾಟ ದಂಧೆ ಇರುವುದು ಬಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ಫಾಕ್ ಸುಲೇಮಾನ್ ಮುಲ್ಲಾ ಎಂಬಾತ ಅಕ್ರಮ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. ಈ ಕುರಿತು ಪತ್ರಕರ್ತ ಬಸವರಾಜಗೆ ಎಲ್ಲವೂ ಗೊತ್ತಿತ್ತು. ಹಗರಣ ಬಯಲಿಗೆಳೆಯುವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಜೊತೆಗೆ ಹೆಚ್ಚುವರಿ ಹಣಕ್ಕೆ ಭೇಡಿಕೆ ಇಟ್ಟ ಕಾರಣಕ್ಕೆ ಆರೋಪಿ ತನ್ನ ಸ್ನೇಹಿತರ ಜೊತೆ ಸೇರಿ ಪತ್ರಕರ್ತನನ್ನು ಅಪಘಾತ ಮಾಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ಫಕ್, ನಂದೇಶ್ವರ ಹಾಗೂ ಮಹೇಶ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


