Select Page

Advertisement

ಬೈಲಹೊಂಗಲ : ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ; ಜನಸಾಮಾನ್ಯರಿಗೆ ಸಂಕಷ್ಟ

ಬೈಲಹೊಂಗಲ : ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ; ಜನಸಾಮಾನ್ಯರಿಗೆ ಸಂಕಷ್ಟ

ಬೈಲಹೊಂಗಲ-ನಗರದ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಖಾಯಂ ಕಂದಾಯ ನಿರೀಕ್ಷಕರು ಇಲ್ಲದ ಕಾರಣ ಜನತೆ ತಮ್ಮ ಅಗತ್ಯ ಕೆಲಸ, ಕಾರ್ಯಗಳಿಗಾಗಿ ಅಲೆದಾಡುವಂತಾಗಿದ್ದು ಸರಕಾರದ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ವಾತಂತ್ರ ವೀರ ಸೇನಾನಿಗಳ ನಾಡಾದ ಬೈಲಹೊಂಗಲ ಕಂದಾಯ ನಿರೀಕ್ಷಕರ ಕಚೇರಿ ಇದ್ದು ಪಟ್ಟಣ ಸೇರಿ ಸುಮಾರು 36 ಗ್ರಾಮಗಳ ವ್ಯಾಪ್ತಿಗೆ ಈ ಸರ್ಕಲ್ ಒಳಪಟ್ಟಿದ್ದು ಈಗಾಗಲೇ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ನಿರೀಕ್ಷಕ ಸುರೇಶ ಮಾಳಗಿ ಅಧಿಕಾರಿಯನ್ನು ಕಳೆದ ಎರಡ್ಮೂರು ತಿಂಗಳುಗಳಿಂದ ರಾಮದುರ್ಗಕ್ಕೆ ವರ್ಗಾವಣೆ ಮಾಡಿದ್ದ ಪ್ರಯುಕ್ತ ನೇಸರಗಿಯ

ಕಂದಾಯ ನಿರೀಕ್ಷಕ ಬಸವರಾಜ ಬೋರಗಲ್ ಅವರಿಗೆ ಬೈಲಹೊಂಗಲ ಕಂದಾಯ ನಿರೀಕ್ಷಕ ಕಚೇರಿಯ ಕರ್ತವ್ಯದ ಹೆಚ್ಚುವರಿಯ ನಿರ್ವಹಣೆಯ ಹೊಣೆಯನ್ನು ವಹಿಸಿದ್ದರಿಂದ ಇವರು ನೇಸರಗಿ ಮತ್ತು ಬೈಲಹೊಂಗಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನೇಸರಗಿ ವ್ಯಾಪ್ತಿಯಲ್ಲಿ ಸುಮಾರು 52 ಹಾಗೂ ಬೈಲಹೊಂಗಲ ಪಟ್ಟಣ ಸೇರಿ 36 ಹಳ್ಳಿಗಳನ್ನು ಬೈಲಹೊಂಗಲ ವೃತ್ತ ಒಳಗೊಂಡಿದೆ. ಈಗಾಗಿ ಒಬ್ಬ ಕಂದಾಯ ನಿರೀಕ್ಷಕ ಎರಡೆರಡು ಕಡೆ ಈ ಹುದ್ದೆ ನಿರ್ವಹಿಸಬೇಕಾಗಿದೆ. ಕರ್ತವ್ಯದ ಸಮಯದ ಮುಂಜಾನೆಯಿಂದ ಮಧ್ಯಾಹ್ನ 4 ರವರೆಗೆ ನೇಸರಗಿಯಲ್ಲಿ ನಂತರದ ಸಮಯ ಬೈಲಹೊಂಗಲಕ್ಕೆ ಮೀಸಲಿಡುವದರಿಂದ

ನಾಗರಿಕರಿಗೆ, ಉದ್ಯೋಗ ಆಂಕಾಂಕ್ಷಿಗಳಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ ಅವಶ್ಯ ಪ್ರಮಾಣ ಪತ್ರಗಳನ್ನು ಪಡೆಯಲು ಸಮಯ ವಿಳಂಬವಾಗಿ ಸಮಸ್ಯೆ ಎದುರಿಸುವದರೊಂದಿಗೆ ಅಲೆದಾಡಿ ಹರಸಾಹಸ ಪಟ್ಟು ಪಡೆಯಬೇಕಾಗಿದೆ.

ಈ ಅವ್ಯವಸ್ಥೆಯಿಂದ ಈ ಭಾಗದ ಜನತೆಗೆ ಜಾತಿ ಮತ್ತು ಆದಾಯ, ಪಿಂಚಣಿ, ವಾರಸಾ ಸೇರಿದಂತೆ ಕಂದಾಯಕ್ಕೆ ಸಂಬಂಧಪಡುವ ಕಾಗದ ಪತ್ರಗಳನ್ನು ಪಡೆದುಕೊಳ್ಳಲು ಹಲವು ಸಮಸ್ಯೆ ಎದುರಾಗಿದೆ. ಕಾರಣ ಕೂಡಲೇ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಖಾಯಂ ಕಂದಾಯ ನಿರೀಕ್ಷಕರನ್ನು ಬೈಲಹೊಂಗಲ ವೃತ್ತಕ್ಕೆ ನೇಮಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!