ಬೈಲಹೊಂಗಲ ಪೊಲೀಸರ ಬಲೆಗೆ ಬಿತ್ತು ದೊಡ್ಡ ತಿಮಿಂಗಿಲ
ಬೈಲಹೊಂಗಲ: ಟ್ರ್ಯಾಕ್ಟರ್ ಟ್ರೇಲರ್ ಕಳವು ಮಾಡಿದ್ದ ಆರೋಪಿಗಳನ್ನು ಬೈಲಹೊಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋಕಾಕ ತಾಲೂಕಿನ ನೆಲಗಂಟಿ ಗ್ರಾಮದ ಬಸಪ್ಪ ಸತ್ಯಪ್ಪ ತಳವಾರ(27), ಅಡಿವೆಪ್ಪ ಲಕ್ಷ್ಮಣ ಸಿಂತಮನಿ(28), ರಾಜು ಶೆಟ್ಟೆಪ್ಪ ನಾಯ್ಕ(26), ಸಿದ್ದಪ್ಪ ಶಿವಪ್ಪ ಚಿಕ್ಕೋಪ್ಪದವರ(22), ಪರಸಪ್ಪ ಬಸಪ್ಪ ಕಡ್ಲಿ(21) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಅಂದಾಜು ರೂ.14 ಲಕ್ಷದ ಮೌಲ್ಯದ ಐದು ಟ್ರ್ಯಾಕ್ಟರ್ ಟ್ರೇಲರ, ಒಂದು ಟ್ರ್ಯಾಕ್ಟರ್ ಇಂಜಿನ್, ಒಂದು ರೂಟರ, ಗುರದಾಳ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಘಟನೆ ಹಿನ್ನಲೆ: ತಾಲೂಕಿನ ಹೋಳಿಹೊಸೂರ, ನೇಗಿನಹಾಳ ಗ್ರಾಮಗಳ ಹದ್ದಿಯಲ್ಲಿ ಟ್ರ್ಯಾಕ್ಟರ್ ಟ್ರೇಲರಗಳು ಕಳುವಾದ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಳ್ಳರ ಪತ್ತೆಗೆ ಬೆಳಗಾವಿ ಎಸ್ ಪಿ ಡಾ ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ ಪಿ ಗಳಾದ ಶ್ರುತಿ ಕೆ, ಆರ್ ಬಿ ಬಸರಗಿ, ಡಿ ವೈ ಎಸ್ ಪಿ ಡಾ ವೀರಯ್ಯ ಹಿರೇಮಠ, ಸಿಪಿಐ ಪ್ರಮೋದ ಯಲಿಗಾರ, ಶಿವಾನಂದ ಗುಡಗನಟ್ಟಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಪಿ ಎಸ್ ಐಗಳಾದ ಪಿ ಎಸ್ ಮುರನಾಳ, ಗುರುರಾಜ ಕಲಬುರ್ಗಿ , ಈರಪ್ಪ ರಿತ್ತಿ, ಪ್ರವೀಣ ಕೋಟಿ, ಎ ಎಸ್ ಐಗಳಾದ ಬಿ ಬಿ ಹುಲಕುಂದ , ಶಂಕರ ಮೆಣಸಿನಕಾಯಿ, ಜೆ ಆರ್ ಮಳಗಲಿ , ಚೇತನ ಬುದ್ನಿ, ಎಂ ಎಸ್ ದೇಶನೂರ, ಕೆ ಎಫ್ ವಕ್ಕುಂದ, ಶರೀಫಸಾಬ ದಪೆದಾರ, ಎ ಎಂ ಚಿಕ್ಕೇರಿ, ಎ ಕೆ ಡೊಂಬರ, ಸಚಿನ ಪಾಟೀಲ, ವಿನೋದ ಠಕ್ಕನ್ನವರ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು. ಎಸ್ಪಿ ಡಾ. ಭೀಮಾಶಂಕರ ಗುಳೇದ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


