ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆ ಅಸ್ವಸ್ಥ ; ಆರೋಗ್ಯ ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ ಈ ಶೌಚಾಲಯ
ಬೆಳಗಾವಿ : ಒಬ್ಬ ತಾಲೂಕು ಆರೋಗ್ಯ ಅಧಿಕಾರಿ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸ್ವಚ್ಚವಾಗಿ ಇದ್ದರೆ ಇಡೀ ತಾಲೂಕಿನ ಜನರ ಆರೋಗ್ಯವೂ ಚೆನ್ನಾಗಿರುತ್ತದೆ. ಆದರೆ ಬೈಲಹೊಂಗಲ ತಾಲೂಕು ಆರೋಗ್ಯ ಅಧಿಕಾರಿಗಳು ಸಂಬಳವೇ ಇಲ್ಲದೆ ಪುಕ್ಕಟೆ ಕೆಲಸ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡುತ್ತದೆ.
ಬೈಲಹೊಂಗಲ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕಥೆ ಹೇಳತೀರದಾಗಿದೆ. ಇಲ್ಲಿನ ಶೌಚಾಲಯ ವ್ಯವಸ್ಥೆ ನೋಡಿದರೆ ನಿಂತಲ್ಲೇ ಹೆರಿಗೆ ಆದರೂ ಆಶ್ಚರ್ಯವಿಲ್ಲ. ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆ ಒಂದೊಂದು ಭಾಗವೂ, ಹಳೆ ಶಿಲಾಯುಗದ ಇತಿಹಾಸ ತಿಳಿಸುತ್ತವೆ ಎಂದು ಭಾಸವಾಗುತ್ತದೆ.
ಇಲ್ಲಿನ ಆರೋಗ್ಯ ಅಧಿಕಾರಿ / ನಿರಂತರ ಗೆದ್ದು ಇತಿಹಾಸದ ಪುಟದಲ್ಲಿ ದಾಖಲಾದ ಶಾಸಕರು ಸೇರಿದಂತೆ ಸರ್ಕಾರಿ ಸಂಭಳ ಪಡೆಯುವ ಯಾವೊಬ್ಬ ಅಧಿಕಾರಿಯಾದರು ತಾಲೂಕು ಆರೋಗ್ಯ ಕೇಂದ್ರದ ಅಸ್ವಸ್ಥ ಸ್ಥಿತಿ ನೋಡದಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಪ್ರಮುಖವಾಗಿ ಹೆರಿಗೆ ವಾರ್ಡ್ ಹಾಗೂ ತುರ್ತು ಚಿಕಿತ್ಸಾ ಘಟಕ ಇವೆ. ಆದರೆ ಇದಕ್ಕೆ ಹೊಂದಿಕೊಂಡ ಹೊಸ ಶೌಚಾಲಯ ಕಟ್ಟದ ಸ್ಥಿತಿ ನೋಡಿದರೆ ಎಂತವರಿಗೂ ಮೂರ್ಛೆ ಬರುವುದು ಪಕ್ಕಾ. ಇನ್ನೂ ತಡರಾತ್ರಿ ಆದರೆ ತುರ್ತು ಚಿಕಿತ್ಸಾ ಘಟಕಕ್ಕೆ ಭೀಗ ಹಾಕುವ ಸಿಬ್ಬಂದಿಗಳನ್ನು ಯಾರೂ ಕೇಳುವವರೇ ಇಲ್ಲ.
ಒಂದು ಕಡೆ ಜಿಲ್ಲೆಯ ಇಬ್ಬರು ಪ್ರಭಲ ಸಚಿವರು ಸರ್ಕಾರದ ಮಹತ್ವದ ಜವಾಬ್ದಾರಿ ಹೊತ್ತು ರಾಜ್ಯದಲ್ಲಿ ಉತ್ತಮ ಕೆಲಸದ ಮೂಲಕ ಜಿಲ್ಲೆಯ ಗೌರವ ಹೆಚ್ಚಿಸುತ್ತಿದ್ದರೆ, ಇತ್ತ ಸರ್ಕಾರದ ಸಂಬಳ ಪಡೆದು ಜನರಿಗೆ ನ್ಯಾಯ ನೀಡದೆ ಅಮೂಲ್ಯ ಮಾನವ ಜನ್ಮವನ್ನ ಕಳೆಯುವ ಕೆಲ ಅಧಿಕಾರಿ ವರ್ಗ ಮತ್ತೊಂದು ಕಡೆ.
ಸಂಬಂಧಪಟ್ಟವರು ಕ್ರಮ ಕೈಗೊಂಡ್ರೆ ನಿಮ್ಮ ಹೆಸರಲ್ಲಿ ಶೌಚಾಲಯ ಆದ್ರೂ ಉಸಿರಾಡ್ತಾವೆ ಅಷ್ಟೇ…..!

