ತಂದೆಯಂತೆ ಹುಕ್ಕೇರಿ ಮಠಕ್ಕೆ ವಿಜಯೇಂದ್ರ ಭೇಟಿ ; ಪೂಜ್ಯರ ಶ್ರೀರಕ್ಷೆ
ಹುಕ್ಕೇರಿ : ಹುಕ್ಕೇರಿ ಹಿರೇಮಠದ ದಸರಾ ವೈಭವ ನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ. ಶ್ರೀಮಠದ ಪೂಜ್ಯರು ನನಗೆ ಧೈರ್ಯವಾಗಿ
ಮುನ್ನುಗ್ಗಿ ಕೆಲಸ ಮಾಡುವಂತೆ ಆಶಿರ್ವಾದ ನೀಡಿದ್ದಾರೆ. ಸದಾಕಾಲವೂ ಸಮಾಜದ ಒಳಿತು ಬಯಸುವ ಸ್ವಾಮೀಜಿಗಳ ಭೇಟಿ ಖಷಿ ನೀಡಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜೆಯೇಂದ್ರ ಹೇಳಿದರು.
ಪಟ್ಟಣದ ಹಿರೇಮಠದಲ್ಲಿ ಹಮ್ಮಿಕೊಂಡ ದಸರಾ ಉತ್ಸವದ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ವೈವಿಧ್ಯಮಯ ದಸಾರ ಉತ್ಸವ ಆಚರಿಸುವುದರ ಮೂಲಕ ನಾಡಿಗೆ ಬೆಳಕು ಚೆಲ್ಲುತ್ತಿದ್ದಾರೆ.
ಎಲ್ಲ ಸಮುದಾಯಕ್ಕೆ ಒಳ್ಳೆಯದಾಗಬೇಕು ಎಂಬ ಅವರ ಬಯಕೆಯಾಗಿದೆ. ಜತೆಗೆ ನಮ್ಮ ಕುಟುಂಬಕ್ಕೆ ಒಳ್ಳಯದಾಗಬೇಕೆಂದು ಆರ್ಶಿವದಿಸುತ್ತಾ ಬಂದಿದ್ದಾರೆ. ಅವರ ಆರ್ಶಿವಾದವೇ ನಮ್ಮ ಕುಟುಂಬಕ್ಕೆ ಶ್ರೀರಕ್ಷಣೆಯಾಗಿದೆ ಎಂದು ಹೇಳಿದರು.
ಶಾಸಕ ನಿಖಿಲ ಕತ್ತಿ ಮಾತನಾಡಿ ನಮ್ಮ ಪಕ್ಷದ ನಾಯಕರು ಹಿರೇಮಠಕ್ಕೆ ಆಗಮಿಸಿ ಚಂಡಿಕಾ ಹೋಮದಲ್ಲಿ ಪಾಲ್ಗೋಂಡು ಮಠದ ಭಕ್ತರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸಂತೋಷವಾಗಿದೆ ಎಂದರು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ ಮಾಜಿ ಮುಖ್ಯಮಂತ್ರಿ
ಬಿಎಸ್ ಯೂಡಿರಪ್ಪನವರು ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರವಾದಲ್ಲಿ ಮಠಕ್ಕೆ ಬಂದು ಆರ್ಶಿವಾದ ಪಡೆದುಕೊಳ್ಳುತ್ತಿದ್ದರು, ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅವರು ಚಂಡಿಕಾಹೋಮ ಪೂಜೆ ನೇರವೇರಿಸಿದ್ದಾರೆ. ಅವರ ಸೇವೆ ನಾಡಿಗೆ ಲಭಿಸಲೆಂದು ಹೇಳಿದರು.
ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅವರನ್ನು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಗಳು. ಮಠದ ಭಕ್ತರು, ಪಕ್ಷದ ಮುಖಂಡರು ಸತ್ಕರಿಸಿದರು. ಈ ಸಂದರ್ಭದಲ್ಲಿ ಶಾಸಕ ದಯೋರ್ಧನ ಐಹೋಳೆ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ, ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು.


