ಸಿದ್ದರಾಮಯ್ಯ ಲಾಟರಿ ಹೊಡೆದು ಸಿಎಂ ಆದ : ಕಾಂಗ್ರೆಸ್ ಶಾಸಕನ ಆಡಿಯೋ ವೈರಲ್ ….!
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಲಕ್ಕಿ ಲಾಟರಿ ಸಿಎಂ. ಅಂದು ಸೋನಿಯಾ ಗಾಂಧಿಯನ್ನು ಪರಿಚಯ ಮಾಡಿಸಿಕೊಟ್ಟವನು ನಾನು. ಅದೃಷ್ಟ ಚೆನ್ನಾಗಿತ್ತು ಸಿಎಂ ಆಗ್ಬಿಟ್ಟ ಎಂದು ಶಾಸಕ ಬಿ.ಆರ್ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಡ್ಯದ ಕೆ.ಆರ್ ಪೇಟೆಯಲ್ಲಿ ಶಾಸಕ ಬಿ.ಆರ್ ಪಾಟೀಲ್ ಆಪ್ತರ ಜೊತೆ ಮಾತನಾಡುವ ವೇಳೆಯಲ್ಲಿ ಸಿಎಂ ಸಿದ್ದರಾಮಯ್ಯ ಕುರಿತು ಆಡಿರುವ ವೀಡಿಯೋ ವೈರಲ್ ಆಗಿದೆ.
ಸಿದ್ದರಾಮಯ್ಯ ಲಾಟರಿ ಹೊಡೆದು ಸಿಎಂ ಆಗಿಬಿಟ್ಟ. ನನಗೆ ಯಾರು ಗಾಡ್ ಫಾದರ್ ಇಲ್ಲ. ಮೊದಲಿಗೆ ಸೋನಿಯಾ ಗಾಂಧಿಯನ್ನು ಪರಿಚಯ ಮಾಡಿಸಿದ್ದು ನಾನೇ ಎಂದು ಹೇಳಿಕೆ ನೀಡಿದ್ದಾರೆ.


