ಬೆಳಗಾವಿ : ಅಥಣಿ ತಾಲೂಕಿನ ಲಾಡ್ಜ್ ಒಂದರಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ‌ ಪೊಲೀಸರು ದಾಳಿ ನಡೆಸಿದ್ದು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.‌

ಪಟ್ಟಣದ ಗಾಂಧಿ‌ ಮಾರ್ಕೆಟ್ ನಲ್ಲಿರಿವ ವೆಂಕಟೇಶ್ವರ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನಿಖರವಾಗಿ ದಾಳಿ ಮಾಡಿದ ಪೊಲೀಸರು ಮಹಿಳೆಯರನ್ನು ರಕ್ಷಣೆ ಮಾಡಿ ಲಾಡ್ಜ್ ಮ್ಯಾನೆಂಜರ್ ರುದ್ರಪ್ಪ ನಾವಲಗಿ ಹಾಗೆಯೇ ಶ್ರೀನಾಥ ವಾಘಮೋರೆ ಎಂಬಾತನನ್ನು‌ ಬಂಧಿಸಿದ್ದಾರೆ.‌

ಬಂಧಿತ ಆರೋಪಿಗಳು ಲಾಡ್ಜ್ ನಲ್ಲಿ ಮಹಿಳೆಯರನ್ನು ಕರೆದುಕೊಂಡು ಬಂದು ವೇಶ್ಯಾವಾಟಿಕೆಗೆ ಬಳಿಸಿಕೊಳ್ಳುತ್ತಿದ್ದರು. ಈ ವೇಳೆ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.