ಬೆಳಗಾವಿ : ವಿಕಸಿತ ಭಾರತ ಗ್ರಾಮೀಣ ಉದ್ದಯೋಗ ಮತ್ತು ಆಜೀವಿಕ ಖಾತರಿ ಮಿಷನ್ ಕಾಯ್ಕೆ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಆಡಳಿತಾತ್ಮಕ ತೊಡಕು ಇದ್ದು ಕೂಡಲೇ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಭಿವೃದ್ಧಿ ಅಧಿಕಾರಿಗಳ ಬಿ – ಗ್ರೆಡ್ ಹುದ್ದೆ ಉನ್ನತೀಕರಣ ಸಂಘದ ಅಥಣಿ ಘಟಕದ ವತಿಯಂದ ಮನವಿ ಸಲ್ಲಿಸಲಾಗಿದೆ.

ಅಥಣಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿಲಾಯಿತು. ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ಅನೇಕ ಕಾನೂನಾತ್ಮಕ ತೊಡಕು ಇವೆ. ಈ ಕುರಿತು ಸರಕಾರ ಸ್ಪಷ್ಟ ನಿರ್ದೇಶನ ನೀಡಿಲ್ಲ. 5 ಲಕ್ಷದ ಕಾಮಗಾರಿಗಳಿಗೆ ಟೆಂಡರ್ ವಿನಾಯತಿ ಸೇರಿದಂತೆ ‌ಸ್ಪಷ್ಟ ಮಾರ್ಗದರ್ಶನ ನೀಡುವಂತೆ ಆಗ್ರಹಿಸಿದ್ದಾರೆ.

ಕೆರೆ, ನಾಲಾ ಮತ್ತು ಕಾಲುವೆಗಳ ಹೂಳೆತ್ತುವ ಕಾಮಗಾರಿಗಳು ಅನುಮೋದಿತ ಕಾಮಗಾರಿಗಳಿಗೆ ವ್ಯಾಪ್ತಿಗೆ ಬರುತ್ತದೆಯಾ?, 5 ಲಕ್ಷದೊಳಗಿನ ಕಾಮಗಾರಿಗಳಿಗೆ ಟೆಂಡರ್ ವಿನಾಯತಿ, ಅನುಮೋದಿತ ಪಟ್ಟಿಯ ಹೊರತಾಗಿ ಇತರೆ ತ್ವರಿತ ಕೆಲಸಗಳನ್ನು ಮಾಡುವ ವಿಧಾನ ಸೇರಿದಂತೆ ಅನೇಕ ಗೊಂದಲಗಳ ಕುರಿತು ಮಾರ್ಗದರ್ಶನ ‌ನೀಡುವಂತೆ ಸಂಘಟನೆ ಸದಸ್ಯರು ಆಗ್ರಹಿಸಿದ್ದಾರೆ.