ಅಥಣಿ : ಮಹಿಳೆಯನ್ನು ಕೊಂದು ಅಪಘಾತದ ಕಥೆ ಕಟ್ಟಿದ್ರಾ ಆರೋಪಿಗಳು..?
ಅಥಣಿ : ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿ ಬರ್ಬರವಾಗಿ ಹತ್ಯೆ ನಡೆಸಿ, ನಂತರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ ಹಂತಕರನ್ನು ಅಥಣಿ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಮಲಾಬಾದ ಗ್ರಾಮದಲ್ಲಿ ಶನಿವಾರ ತಡರಾತ್ರಿ ಜರುಗಿದೆ.
ರೇಣುಕಾ ಸಂತೋಷ ಹೋನಕಾಂಡೆ (34 ) ಕೊಲೆಯಾಗಿರುವ ಮಹಿಳೆಯಾಗಿದ್ದು. ಶನಿವಾರ ತಡ ರಾತ್ರಿ 10 ಗಂಟೆ ಸುಮಾರಿಗೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಮಹಿಳೆಯ ಸಂಬಂಧಿಕರು ಅಥಣಿ ಪೊಲೀಸ್ ಠಾಣೆಯಲ್ಲಿ ಸಂಶಯಸ್ಪದ ದೂರು ಸಲ್ಲಿಸಿದ್ದಾರೆ.
ಮಹಿಳೆಯ ಗಂಡ, ಮಾವ, ಅತ್ತೆ ಸೇರಿದಂತೆ ಅವರ ಸಂಬಂಧಿಕರು ಸೇರಿ ಆರು ಜನ ಮಹಿಳೆಯನ್ನ ಕೊಲೆ ಮಾಡಿ, ರಸ್ತೆ ಅಪಘಾತದ ಕಥೆ ಕಟ್ಟುತ್ತಿದ್ದಾರೆ, ಅವರನ್ನ ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಹರೀಶ ಮಲ್ಲಿಕಾರ್ಜುನ ಹರಳಿ ಎಂಬವರು ದೂರು ಸಲ್ಲಿಸಿದ್ದಾರೆ.
ಈ ದೂರಿನ ಅನ್ವಯ ತಳಕ್ಕೆ ಧಾವಿಸಿದ ಅಥಣಿ ಪೊಲೀಸ್ ಕೊಲೆಯಾಗಿರುವ ಮಹಿಳೆಯ ಗಂಡ ಸಂತೋಷ ಹೊನಖಾoಡೆ, ಮಾವ ಕಾಮಣ್ಣ ಹೊನಖಾoಡೆ, ಅತ್ತೆ ಜಯಶ್ರೀ ಹೊನಖಾoಡೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಸ್ಥಳಕ್ಕೆ ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಅಥಣಿ ವಲಯದ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಸಿಪಿಐ ಸಂತೋಷ್ ಹಳ್ಳೂರ, ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ ಹಾಗೂ ಅವರ ಸಿಬ್ಬಂದಿ ಬೆಟ್ಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದು ರಸ್ತೆ ಅಪಘಾತವಲ್ಲ, ಇದೊಂದು ಕೊಲೆಯಾಗಿದ್ದು, ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಪ್ರಕರಣದ ಕಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸುವೆ.


