Select Page

Advertisement

ಅಥಣಿ : ಭೀಕರ ರಸ್ತೆ ಅಪಘಾತ ಪಿಡಿಒ‌ ಸಾವು

ಅಥಣಿ : ಭೀಕರ ರಸ್ತೆ ಅಪಘಾತ ಪಿಡಿಒ‌ ಸಾವು

ಅಥಣಿ : ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಅನಂತಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ನಾಗನೂರ ಪಿ ಎ ಗ್ರಾಮದ ಅಶೋಕ ಸನದಿ (48) ಮೃತ ದುರ್ದೈವಿ. ಅನಂತಪುರ ಗ್ರಾಮದಿಂದ ತಾಂವಶಿ ಮಾರ್ಗವಾಗಿ ಸಾಗುವ ವೇಳೆ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡದಿದೆ.

ಕಳೆದ 20 ವರ್ಷಗಳಿಂದ ವಿವಿಧ ಗ್ರಾಮ ಪಂಚಾಯತ್ ಕಾರ್ಯಾಲಯಗಲ್ಲಿ ಸೇವೆಯಲ್ಲಿದ್ದು ಕಳೆದ 6 ತಿಂಗಳುಗಳಿಂದ ಅನಾರೋಗ್ಯ ಕಾಣರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ವಯಕ್ತಿಕ ಕೆಲಸದ ನಿಮಿತ್ಯ ಅನಂತಪುರ ಗ್ರಾಮಕ್ಕೆ ಹೋದ ಅಶೋಕ ಮನೆಗೆ ಬರುವ ವೇಳೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಬೈಕ್ ಹಿಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಹಿಂಬದಿಯಿಂದ ಯಾರೋ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸ್ ರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನ ಮರನೊತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!