ಸಾಮಾಜಿಕ ಸೇವೆ ನಮ್ಮೆಲ್ಲರ ಧ್ಯೇಯವಾಗಲಿ : ಪೂರ್ಣಿಮಾ ಪಾಂಗಿ
ಅಥಣಿ : ಸಮಾಜಕ್ಕಾಗಿ ಬದುಕುವುದರಲ್ಲಿ ಸಿಗುವ ಸಂತೃಪ್ತಿ ಬೇರೆ ಯಾವ ಯಾವುದರಲ್ಲಿ ಸಿಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅರಿವು ಮೂಡಿಸುವುವ ಉದ್ದೇಶಕ್ಕಾಗಿ ಇನ್ನರ್ ವ್ಹಿಲ್ ಸಂಸ್ಥೆ ಎಲ್ಲೆಡೆಗೂ ಸಾಮಾಜಿಕ ಸೇವಾ ಕಾರ್ಯ ನಡೆಸಿಕೊಂಡು ಬರುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪಾಂಗಿ ಅಭಿಪ್ರಾಯಪಟ್ಟರು.
ಇನ್ನರ್ ವ್ಹಿಲ್ ಸಂಸ್ಥೆ ರಜತ ಮಹೋತ್ಸವ ಅಂಗವಾಗಿ ಅಥಣಿ ತಾಲೂಕಿನ ಚಮಕೇರಿ ರಸ್ತೆಯಲ್ಲಿರುವ ಸುಕನ್ಯಾ ವೃದ್ದಾಶ್ರಮಕ್ಕೆ ಎರಡು ವ್ಹಿಲ್ ಚೇರ್ ದೇಣಿಗೆ ನೀಡಿ ಮಾತನಾಡಿದ ಇವರು. ನನಗಲ್ಲ, ನಮಗೆ ಎಂಬ ಸಾಮಾಜಿಕ ಒಗ್ಗಟ್ಟು ಸಾರುವ ಸಂದೇಶವನ್ನು ನಾವು ಕೇಳಿರುತ್ತೇವೆ. ಇತರರಿಗಾಗಿ ಬದುಕಿದಾಗ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ. ಈ ರೀತಿಯ ಸಮಾಜಪರ ಸೇವಾ ಕಾರ್ಯಕ್ರಮ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು.

ಅಧ್ಯಕ್ಷೆ ತೃಪ್ತಿ ಕುಲಕರ್ಣಿ ಮಾತನಾಡಿ. ಸಮಾಜದಲ್ಲಿ ಸೇವಾ ಮನೋಭಾವವನ್ನು ಹೆಚ್ಚು ಮೈಗೂಡಿಸಿಕೊಂಡು ಪ್ರಾಮಾಣಿಕತೆ ಪ್ರದರ್ಶಿಸಿದರೆ ಮನಸ್ಸಿಗೆ ಸಿಗುವ ಆನಂದವೇ ಬೇರೆ. ಈ. ನಿಟ್ಟಿನಲ್ಲಿ ಸುಕನ್ಯಾ ವೃದ್ಧಾಶ್ರಮದ ಸೇವಾ ಕಾರ್ಯವನ್ನು ಮೆಚ್ಚಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಲಲಿತಾ ಮೇಕನಮರಡಿ, ಸುನೀತಾ ದೇಸಾಯಿ, ಮಧು ಮಂಗಸೂಳಿ, ಪ್ರಿಯಾ ಚಿಮ್ಮಡ, ಭಾರತಿ ಕೋರೆ, ಶೋಭಾ ಕೋಲಾರ, ಮಹಾದೇವಿ ಪಾಟೀಲ, ರೇಣು ಸೌದಾಗರ, ಸುಜಾತಾ ಜಗದಾಳಮಠ , ಮನೀಷಾ ಸಂಕ್ರಟ್ಟಿ, ಜಯಶ್ರೀ ಪೂಜಾರಿ, ಶಿಲ್ಪಾ ದಾದಪ್ಪಗೊಳ, ಭಾಗ್ಯವಂತಿ ಬಿರಾದಾರ, ಮಹಾದೇವ ಬಿರಾದಾರ, ಈರಣ್ಣ ಅಡಿಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


