Select Page

Advertisement

ಕಳ್ಳರ ಕಾಲಿಗೆ ಗುಂಡೇಟು ; ಕೊನೆಗೂ ತಾಯಿ ಮಡಿಲು ಸೇರಿದ ಮಕ್ಕಳು

ಕಳ್ಳರ ಕಾಲಿಗೆ ಗುಂಡೇಟು ; ಕೊನೆಗೂ ತಾಯಿ ಮಡಿಲು ಸೇರಿದ ಮಕ್ಕಳು

ಅಥಣಿ : ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮ ವಿಕ್ರಂಪುರದ ಬಡಾವಣೆಯಲ್ಲಿ ಹಾಡಹಗಲೇ ಮನೆಗೆ ನುಗ್ಗಿದ್ದ ಕಳ್ಳರು ಇಬ್ಬರು ಮಕ್ಕಳನ್ನು ಅಪಹರಣ ಮಾಡಿಕೊಂಡು ಪರಾರಿಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದ್ದು ಮಕ್ಕಳ ಕಳ್ಳರ ಕಾಲಿಗೆ ಗುಂಡೇಟು ಹೊಡೆದು ಇಬ್ಬರು ಮಕ್ಕಳ‌ ರಕ್ಷಣೆ ಮಾಡಲಾಗಿದೆ.

ಸ್ವಸ್ತಿ ದೇಸಾಯಿ, ವಿಯೋಮ ದೇಸಾಯಿ ಸಹೋದರರನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದು ಅಪಹರಣ ಮಾಡಿ ಪರಾರಿಯಾಗಿದ್ದ ಕಳ್ಳರು ಕೋಹಳ್ಳಿ ಸಿಂಧೂರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ರವಿಕಿರಣ ಕಮಲಾಕರ, ಮಹಾರಾಷ್ಟ್ರದ ಕೊಲ್ಲಾಪೂರ ಮೂಲದ ಸಾಂಭ ಸಾಂಭ ಆ ಕಾಂಬ್ಳೆ, ಬಿಹಾರ ಮೂಲದ ಶಾರುಖ ಶೇಖ್ ಬಂಧಿತ ಆರೋಪಿಗಳು.

ಪೊಲಿಸರ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ದು ಆತ್ಮರಕ್ಷಣೆಗಾಗಿ ಕಳ್ಳರ ಕಾಲಿಗೆ ಗುಂಡೇಟು ಕೊಟ್ಟು
ಇಬ್ಬರು ಮಕ್ಕಳ ರಕ್ಷಣೆ ಮಾಡಿದ್ದಾರೆ. ಈ ಘಟನೆಯಲ್ಲಿ ಪೊಲೀಸರರಿಗೂ ಸಣ್ಣಪುಟ್ಟ ಗಾಯಗಳಾಗಿವೆ.


ಇಬ್ಬರು ಮಕ್ಕಳ ಅಪಹರಣ ಪ್ರಕರಣಕ್ಕೆ ಹಣಕಾಸಿನ ವ್ಯವಹಾರ ಎಂದು ತಿಳಿದುಬಂದಿದೆ. ಮೂರು ತಂಡಗಳ ರಚನೆ ಮಾಡಿ ಆರೋಪಿಗಳಿಗೆ ಬಲೆ ಬೀಸಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈಗಾಗಲೇ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ.

ಡಾ. ಭೀಮಾಶಂಕರ ಗುಳೆದ್
ಎಸ್ಪಿ ಬೆಳಗಾವಿ

Advertisement

Leave a reply

Your email address will not be published. Required fields are marked *

error: Content is protected !!