
ಕಿತ್ತೂರು ಉತ್ಸವದಲ್ಲಿ ಪತ್ರಕರ್ತ ಮಂಜುನಾಥ ಹುಡೇದ ಸಂಗೀತ ಕಲರವ

ಬೆಳಗಾವಿ : ಬೆಳಗಾವಿ ಪತ್ರಕರ್ತ ಹಾಗೂ ಗಾಯಕ ಮಂಜುನಾಥ ಹುಡೇದ ತಂಡದ ಗಾಯನ ಯುವ ಮನಸ್ಸುಗಳ ಹೃದಯ ಗೆದ್ದಿತು. ಇವರ ಸುಮಧುರ ಸಂಗೀತಕ್ಕೆ ಯುವಕರು ಕುಣಿದು ಕುಪ್ಪಳಿಸಿದರು.
ಗುರುವಾರ ಸಂಜೆ ನಡೆದ ಕಿತ್ತೂರು ಉತ್ಸವ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸ್ಸು ಗೆದ್ದವು. ಕಿಕ್ಕಿರಿದು ಸೇರಿದ್ದ ಜನ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದರು.
ಗಾಯಕ ಮಂಜುನಾಥ ಹುಡೇದ್ ತಂಡ ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಗಮನಸೆಳೆಯಿತು. ಮೂರು ದಿನಗಳ ಕಾಲ ನಡೆಯುತ್ತಿರುವ ಕಿತ್ತೂರು ಉತ್ಸವ ಇಂದು ಕೊನೆಯ ದಿನ.