ಸದ್ದಿಲ್ಲದೆ ನಾಮಪತ್ರ ಸಲ್ಲಿಸಿ – ವಾಪಸ್ ಪಡೆದು ಸುದ್ದಿಯಾದ ಶಾಸಕ ಅಶೋಕ್ ಪಟ್ಟಣ್
ರಾಮದುರ್ಗ ಶಾಸಕರಿಗೆ ಭಯ ಹುಟ್ಟಿಸಿದ ಸೊಸೈಟಿ ಚುನಾವಣೆ ; ಸೋಲಿಗೆ ಹೆದರಿ ನಾಮಪತ್ರ ವಾಪಸ್….?
ಬೆಳಗಾವಿ : ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ಸಿನ ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಕೊನೆಗೂ ನಿರಾಸೆ ಅನುಭವಿಸಿ ಸಚೇತಕ ಹುದ್ದೆಗೆ ತೃಪ್ತಿ ಪಟ್ಟುಕೊಂಡಿದ್ದಾರೆ. ಈ ನಡುವೆ ರಾಮದುರ್ಗ ಸಹಕಾರ ಸಂಘದ ಚುನಾವಣೆ ನಾಮಪತ್ರ ಸಲ್ಲಿಸಿ ಸದ್ದಿಲದೆ ವಾಪಸ್ ಪಡೆಯುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ.
ಬರುವ ಡಿಸೆಂಬರ್ 30 ರಂದು ನಡೆಯಲಿರುವ “ ವಿವಿದ್ದೋದೆಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ರಾಮದುರ್ಗ ” ಇದರ ಚುನಾವಣೆ ನಡೆಯಲಿದೆ. ಈಗಾಗಲೇ ವಿವಿಧ ವಿಭಾಗದ ಐವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ನಡುವೆ ಸದ್ದಿಲ್ಲದೆ ನಾಮಪತ್ರ ಸಲ್ಲಿಸಿ ವಾಪಸ್ ಪಡೆಯುವ ಮೂಲಕ ಶಾಸಕ ಅಶೋಕ್ ಪಟ್ಟಣ್ ಸುದ್ದಿಯಾಗಿದ್ದಾರೆ.
ಒಬ್ಬ ಶಾಸಕರಾದವರು ಸೊಸೈಟಿ ಚುನಾವಣೆಗೆ ಯಾಕೆ ನಿಲ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಆದರೆ ಸೋಲಿನ ಭಯದಿಂದ ಕೊಟ್ಟ ನಾಮಪತ್ರ ವಾಪಸ್ ಪಡೆಯುವ ಮೂಲಕ ಸ್ಥಳೀಯ ಚುನಾವಣೆ ಎಂಎಲ್ಎ ಚುನಾವಣೆಗಿಂತಲೂ ಬಲು ಕಠಿಣ ಎಂಬುದನ್ನು ತೋರಿಸಿದ್ದಾರೆ. ಸಾಮಾನ್ಯ ಸಾಲಗಾರ ವರ್ಗದಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಪಟ್ಟಣ್ ಅವರಿಗೆ ಹಲವರು ಪ್ರತಿಸ್ಪರ್ಧಿಯಾದ ಕಾರಣ ತಮ್ಮ ನಾಮಪತ್ರವನ್ನೇ ವಾಪಸ್ ಪಡೆದಿದ್ದಾರೆ.
ಈಗಾಗಲೇ ರಾಮದುರ್ಗ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಐವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ ಶಾಸಕರು ನಾಮಪತ್ರ ಸಲ್ಲಿಸುತ್ತಿದ್ದಂತೆ ವಿರೋಧಿ ಬಣ ಎಚ್ಚೆತ್ತುಕೊಂಡ ಪರಿಣಾಮ ಸುಮಾರು 10 ಕ್ಕೂ ಅಧಿಕ ಜನ ಸ್ಪರ್ಧೇ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
ಅವಿರೋಧ ಆಯ್ಕೆ ಕನಸು ಕಂಡಿದ್ದ ಶಾಸಕರಿಗೆ ಎದುರಾಳಿಗಳ ಹುಮ್ಮಸ್ಸು ಕುಗ್ಗಿಸಿದ್ದು, ಸೋತರೆ ವರ್ಚಸ್ಸಿಗೆ ದಕ್ಕೆ ಎಂದು ಕೊಟ್ಟ ನಾಮಪತ್ರವನ್ನೇ ವಾಪಸ್ ಪಡೆದಿದ್ದಾರೆ.
ಉಳಿದ ಮೂರು ಸ್ಥಾನಕ್ಕೆ ಬರುವ ಡಿಸೆಂಬರ್ 30 ರಂದು ಚುನಾವಣೆ ನಡೆಯಲಿದೆ.
***ಸೊಸೈಟಿ ಚುನಾವಣೆಗೆ ಶಾಸಕರ ಸ್ಪರ್ಧೇಗೆ ಕಾರಣ ***
ಡಿಸಿಸಿ ಬ್ಯಾಂಕ್ ನಲ್ಲಿ ಮಹತ್ವದ ಹುದ್ದೆ ಸಾಧಿಸಲು ಸಾಮಾನ್ಯವಾಗಿ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಚುನಾಯಿತ ಸದಸ್ಯರಾಗುವುದು ಕಡ್ಡಾಯ. ಈ ಕಾರಣದಿಂದ ಮುಂಬರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪಟ್ಟಣ್ ಅವರು ಸ್ಥಳೀಯ ಸಹಕಾರಿ ಸಂಘದಲ್ಲಿ ಚುನಾಯಿತ ಸದಸ್ಯರಾಗಲು ನಾಮಪತ್ರ ಸಲ್ಲಿಸಿರಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
***************
ಈ ಕುರಿತು ನಮ್ಮ ಬೆಳಗಾವಿ ವಾಯ್ಸ್ ಜೊತೆ ಪೋನ್ ಕರೆಯಲ್ಲಿ ಮಾತನಾಡಿ, ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದು. ಮುಂಬರುವ ಡಿಸೆಂಬರ್ 30 ರಂದು ಚುನಾವಣೆ ನಡೆಯಲಿದ್ದು ಈಗಾಗಲೇ ಐವರು ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
***************




