ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್ ; ಇವರೇ ನೋಡಿ ಹುಡುಗ..!
ಬೆಂಗಳೂರು : ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ( Anchor Anushree ) ಅವರ ಮದುವೆ ಫಿಕ್ಸ್ ಆಗಿದೆ. ಕರಾವಳಿ ಹುಡಿಗಿಯ ಕೈ ಹಿಡಿಯಲು ಮನೆಯವರು ಮೆಚ್ಚಿದ ಹುಡುಗ ಸಜ್ಜಾಗಿದ್ದಾನೆ.
ಅನುಶ್ರೀ ಕುಟುಂಬದ ಸದಸ್ಯರು ನೋಡಿದ ಹುಡುಗನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಕೊನೆಗೂ ಅನುಶ್ರೀ ಮದುವೆ ದಿನಾಂಕ ನಿಗದಿಯಾಗಿದೆ.
ಕಳೆದ ಒಂದು ವರ್ಷದ ಹಿಂದೆಯೇ ಅನುಶ್ರೀ ಮದುವೆ ಕುರಿತು ಸುದ್ದಿ ಹಬ್ಬಿತ್ತು. ಆದರೆ ಕೊನೆಗೂ ಈ ಸುದ್ದಿ ನಿಜವಾಗಿದ್ದು ಬೆಂಗಳೂರು ಮೂಲದ ಉದ್ಯಮಿ ಕೈ ಹಿಡಿಯಲಿದ್ದಾರೆ.
ಹೌದು ಮಂಗಳೂರು ಮೂಲದ ಆದರೆ ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಜೊತೆ ಅನುಶ್ರೀ ಮದುವೆ ಎನ್ನುವ ಮಾತುಗಳು ಕೇಳಿಬರ್ತಿದೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಅನುಶ್ರೀ ಹಾಗೂ ರೋಷನ್ ಮದುವೆಗೆ ಕುಟುಂಬ ಸದಸ್ಯರು ಸಿದ್ಧತೆ ಆರಂಭಿಸಿದ್ದಾರೆ. ಕೂರ್ಗ್ ಮೂಲದ ಉದ್ಯಮಿ ರೋಷನ್ ಮಗಳಿಗೆ ಸರಿಯಾದ ಜೋಡಿ ಎಂದು ಅನುಶ್ರೀ ತಾಯಿ ಕೂಡ ಒಪ್ಪಿದ್ದಾರಂತೆ.
ಕೆಲ ದಿನಗಳ ಹಿಂದೆ ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಅನುಶ್ರೀ ಮನದಾಳ ತೆರೆದಿಟ್ಟಿದ್ದರು. “ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು” ಎಂದು ಹೇಳಿಕೊಂಡಿದ್ದರು.ಆಗಸ್ಟ್ 28 ಕ್ಕೆ ಮದುವೆ ದಿನಾಂಕ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ.


