ತಮಿಳುನಾಡಿನಲ್ಲಿ ಕಮಲ ಪರಾಕ್ರಮ ; ಅಣ್ಣಾಮಲೈ ಮೆಚ್ಚಿದನಾ ಮತದಾರ..?
ಬೆಂಗಳೂರು : ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ಕಮಲ ಅರಳಿಸಲು ಮಾಡಿದ್ದ ರಣತಂತ್ರ ಫಲ ನೀಡಿದಂತೆ ಕಂಡುಬರುತ್ತಿದೆ. ಅಣ್ಣಾಮಲೈ ನೇತೃತ್ವದ ಯುವ ರಾಜಕಾರಣಕ್ಕೆ ತಮಿಳರು ಜೈಕಾರ ಹಾಕಿರುವುದು ಎಕ್ಸಿಟ್ ಪೋಲ್ ನಲ್ಲಿ ಕಾಣಬಹುದಾಗಿದೆ.
ಶನಿವಾರ ವಿವಿಧ ಸಂಸ್ಥೆಗಳು ಮಾಡಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಇತಿಹಾಸ ನಿರ್ಮಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ರಾಜಕಾರಣವನ್ನು ಜನ್ನ ಪ್ರೀತಿಯಿಂದ ಮೆಚ್ಚಿದ್ದಾರೆ ಎನ್ನಲಾಗುತ್ತಿದೆ.
ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ತಮಿಳುನಾಡಿನಲ್ಲಿ ಈ ಬಾರಿ ಆಡಳಿತಾರೂಢ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಅತಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಲಾಗುತ್ತಿದೆ. 39 ಲೋಕಸಭಾ ಕ್ಷೇತ್ರ ಹೊಂದಿರುವ ತ.ನಾಡಿನಲ್ಲಿ ಈ ಬಾರಿ ಇಂಡಿಯಾ ಒಕ್ಕೂಟ ಹೆಚ್ಚಿನ ಸ್ಥಾನ ಗೆಲ್ಲುತ್ತವೆ ಎಂದು ಸಮೀಕ್ಷೆ ಹೇಳಿವೆ.
ಇದೇ ಮೊದಲಬಾರಿಗೆ ತ.ನಾಡಿನಲ್ಲಿ ಬಿಜೆಪಿ ಮೂರು ಸ್ಥಾನಗಳವರೆಗೆ ಗೆಲ್ಲುವ ಸಂಭವ ಇದೆ ಎಂದು ಹೇಳಲಾಗುತ್ತಿದ್ದು ಅಣ್ಣಾಮಲೈ ಅವರ ಪ್ರಭಾವವೂ ಹೆಚ್ಚಿದಂತೆ ಕಾಣುತ್ತಿದೆ.


