ಬೆಳಗಾವಿ ಶ್ವಾನ ಅದಿತಿಗೆ ಪ್ರಥಮ ಸ್ಥಾನ ; ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ..!

ಬೆಳಗಾವಿ : ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ 2025 ರ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಶ್ವಾನ ಅದಿತಿಗೆ ಪ್ರಥಮ ಸ್ಥಾನ
ಲಭಿಸಿದೆ.
ಶ್ವಾನ ಅದಿತಿ ಮಾದಕ ವಸ್ತು ಪತ್ತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದೆ.
ಮಾದಕವಸ್ತು ಪತ್ತೆ ವಿಭಾಗದ ಸಿಬ್ಬಂದಿ ಮಹೇಶ ಘಟ್ನಟ್ಟಿ ಹಾಗೂ ಯಲ್ಲೇಶ ನಾಯಕ ಅವರ ತರಬೇತಿ ಮತ್ತು ಆರೈಕೆಯಲ್ಲಿ ಅದಿತಿ ಶ್ವಾನವು ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಸ್ವೀಕರಿಸಿದೆ.

