BREAKING : ಪಾದಯಾತ್ರೆ ಹೊರಟವರ ಮೇಲೆ ಹರಿದ ಕಾರು ; 6 ಜನರ ಸ್ಥಿತಿ ಗಂಭೀರ ; ಹಾರೂಗೇರಿ
ಹಾರೂಗೇರಿ : ಪಂಢರಪುರಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಕಾರು ಹರಿದ ಪರಿಣಾಮ 6 ಜನ ಭಕ್ತರು ಗಂಭೀರ ಸ್ಥಿತಿಯಲ್ಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಘಟನೆ ಸಂಭವಿಸಿದೆ.
ರಾಯಬಾಗ ತಾಲೂಕಿನ ಹಿಡಕಲ್ ಮೂಲದ ಭಕ್ತರು ಅಥಣಿ ಮಾರ್ಗವಾಗಿ ಪಾದಯಾತ್ರೆ ತೆರಳುತ್ತಿದ್ದರು. ಈ ವೇಳೆ ಕಾರು ಚಾಲಕನ ಅಜಾಗರೂಕತೆಯಿಂದ 6 ಯುವಕರ ಮೇಲೆ ಕಾರು ಹರಿದಿದೆ.
ಗಂಭೀರವಾಗಿ ಗಾಯಗೊಂಡ ಯುವಕರನ್ನು ಹಾರೂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

