Video – ಆಂಟಿ ಐ ಲವ್ ಯು ಅಂದವನಿಗೆ ಬಿತ್ತು ಬೂಟಿನ ಏಟು
ಬೆಳಗಾವಿ : ಮಹಿಳೊಬ್ಬರಿಗೆ ಯುವಕನೋರ್ವ ಪ್ರೀತಿ ನಿವೇದನೆ ಇಡುವ ಮೂಲಕ ಪೀಡಿಸುತ್ತಿದ್ದವನಿಗೆ ಸಾರ್ವಜನಿಕವಾಗಿ ಚಪ್ಪಲಿ ಸೇವೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ವಿನಾಯಕ ಕೋಲಕಾರ ಎಂಬುವವ ಮಹಿಳೆಯೊಬ್ಬರಿಗೆ ಐ ಲವ್ ಯು ಎಂದು ಹೇಳುತ್ತ ಪದೇ, ಪದೇ ಫೋನ್ ಮೂಲಕ ಸಂದೇಶ ಕಳುಹಿಸುತ್ತಿದ್ದ. ಇದರಿಂದ ನೊಂದ ಮಹಿಳೆ ಕಾಮುಕ ಯುವಕನಿಗೆ ಸಾರ್ವಜನಿಕವಾಗಿ ಚಪ್ಪಲಿ ಸೇವೆ ಮಾಡಿದ್ದಾಳೆ.
ಸಧ್ಯ ಯುವಕನಿಗೆ ಮಹಿಳೆ ಚಪ್ಪಲಿ ಏಟು ಕೊಟ್ಟ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಮಹಿಳೆಯ ಪ್ರತಿಕ್ರಿಯೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


