Select Page

Advertisement

ಹಸಿದು ಬಳಲುತ್ತಿರುವವರ ಬಾಯಿಗೆ ಅನ್ನ ಹಾಕಬೇಕೆ ಹೊರತು ನಿಮ್ಮ ಶಿಶ್ನ ಅಲ್ಲ :  ನಟಿ ರಶ್ಮಿ ಗೌತಮ್

ಹಸಿದು ಬಳಲುತ್ತಿರುವವರ ಬಾಯಿಗೆ ಅನ್ನ ಹಾಕಬೇಕೆ ಹೊರತು ನಿಮ್ಮ ಶಿಶ್ನ ಅಲ್ಲ :  ನಟಿ ರಶ್ಮಿ ಗೌತಮ್

ಬೆಂಗಳೂರು, ಮೇ 02: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ಇರುವ ಪೆನ್‌ಡ್ರೈವ್ ಪ್ರಕರಣ ಕರ್ನಾಟಕ ಮಾತ್ರವಲ್ಲದೇ, ವಿದೇಶಗಳಲ್ಲಿ ಸಹ ಸುದ್ದಿಯಾಗಿದೆ. ಪ್ರಕರಣಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಕುರಿತು ತೆಲುಗು ನಟಿ ರಶ್ಮಿ ಗೌತಮ್ (Rashmi Gutam) ಪೋಸ್ಟ್ ವೊಂದು ಭಾರೀ ಸಂಚಲನ ಸೃಷ್ಟಿಸಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ ವಿರುದ್ಧ ರಾಜಕೀಯ ಪಕ್ಷಗಳು, ನಾಯಕರು ಜೊತೆಗೆ ಮಹಿಳಾ ಸಮುದಾಯ, ಕೆಲವು ನಟಿಯರು ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಇದೇ ವಿಚಾರವಾಗಿ, ತೆಲುಗು ಜನಪ್ರಿಯ ರಿಯಾಲಿಟಿ ಶೋನ ನಿರೂಪಕಿ ಆಗಿರುವ ನಟಿ ರಶ್ಮಿ ಗೌತಮ್ ಅವರು ವ್ಯಭಿಚಾರ ಮತ್ತು ಮಹಿಳೆ ಕುರಿತಾದ ಇನ್‌ಸ್ಟಾಗ್ರಾಮ್‌ನಲ್ಲಿ ಪೊಸ್ಟ್/ಸ್ಟೋರಿ ವೈರಲ್ ಆಗಿದೆ. ಅವರು ತಮ್ಮ ಇನ್‌ಸ್ಟಾದಲ್ಲಿ, ಪ್ರಸಿದ್ಧ ಲೇಖಕಿ ‘ರಚೆಲ್ ಮೊರಾನ್’ (Rachel Moran) ಅವರ ಕೋಟ್‌ ಹಾಕಿದ್ದರು. ಪ್ರಜ್ವಲ್ ರೇವಣ್ಣ ಪ್ರಕರಣ ಬಹಿರಂಗವಾದ ಬೆನ್ನಲ್ಲೆ ನಟಿಯ ಈ ಸ್ಟೋರಿ ಭಾರಿ ಸುದ್ದಿಯಾಗಿದೆ.

ನಟಿ ಹಂಚಿಕೊಂಡ ಕೋಟ್‌ನಲ್ಲಿ ಏನಿದೆ?

ನಟಿ ರಶ್ಮಿ ಗೌತಮ್ ಅವರು, ”ಮಹಿಳೆಯರು ಬಡತನದಲ್ಲಿರುವಾಗ ಮತ್ತು ಹಸಿದು ಬಳಲುತ್ತಿರುವವರ ಬಾಯಿಗೆ ಅನ್ನ ಹಾಕಬೇಕೆ ಹೊರತು ನಿಮ್ಮ ಶಿಶ್ನ ಅಲ್ಲ” ಎಂಬ ಲೇಖಕಿ ಕೋಟ್ ಹಂಚಿಕೊಂಡಿದ್ದರು. ಈ ಮೂಲಕ ಮಹಿಳಾ ದೌರ್ಜನ್ಯವನ್ನು ಅವರು ಖಂಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!