ಕಾಂಗ್ರೆಸ್ ಶಾಸಕರದ್ದು ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ ; ಮಳೆಗಾಲ ಆರಂಭ ಎಂದ ನೆಟ್ಟಿಗರು….!
ಬೆಂಗಳೂರು : ರಾಜ್ಯದ ಪ್ರಸ್ತುತ ಕಾಂಗ್ರೆಸ್ ಶಾಸಕರದ್ದು ಎನ್ನಲಾದ ಅಶ್ಲೀಲ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಪ್ರಭಾವಿ ಜಿಲ್ಲೆಯ ಶಾಸಕರದ್ದು ಎನ್ನಲಾದ ಈ ವೀಡಿಯೋದಲ್ಲಿ ಮಹಿಳೆಯೊಬ್ಬರ ಜೊತೆ ವೀಡಿಯೋ ಕಾಲ್ ನಲ್ಲಿ ಸಂಭಾಷಣೆ ನಡೆಸಿದ್ದಾಗಿದೆ. ಅಷ್ಟಕ್ಕೂ ಆ ವೀಡಿಯೋದಲ್ಲಿರುವ ಮಹಿಳೆ ಕೂಡಾ ರಾಜಕೀಯ ವ್ಯಕ್ತಿಗಳ ಒಡನಾಟ ಹೊಂದಿದವರಾಗಿದ್ದಾರೆ
ಇನ್ನೂ ಈ ಘಟನೆ ವೀಡಿಯೋದಲ್ಲಿ ಇದ್ದಾರೆ ಎನ್ನಲಾದ ಶಾಸಕ ಹಾಗೂ ಮಹಿಳೆ ಯಾರೂ ಹೇಳಿಕೆ ನೀಡಿಲ್ಲ. ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಂತು ನಿಂತಿಲ್ಲ.
ಈಗಾಗಲೇ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಹರಿದಾಡಿದ್ದು ರಾಜ್ಯ ಸರ್ಕಾರ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಶಾಸಕರ ವೀಡಿಯೋ ಬಂದಿರುವುದು ಕುತೂಹಲ ಮೂಡಿಸಿದೆ.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಇಕ್ಬಾಲ್ ಹುಸೇನ್. ಯಾರದ್ದೋ ವೀಡಿಯೋ ಬಂದಿದೆ ಎಂದು ನಮ್ಮ ಹೆಸರು ಹಾಳು ಮಾಡಲು ಹೊರಟಿದ್ದಾರೆ. ಆ ಮಹಿಳೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ನನಗೆ ಕರೆ ಮಾಡಿದ್ದು ಅದನ್ನೇ ಎಲ್ಲ ಕಡೆ ಹಂಚುತ್ತಿದ್ದಾರೆ ಎಂದು ಹೇಳಿದರು.
ಇನ್ನೂ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಮಹಿಳೆಯರಿಗೆ ಅನ್ಯಾಯ ಮಾಡಿರುವ ರಾಕ್ಷಸ ಪ್ರವೃತ್ತಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.


