Select Page

Advertisement

ಡಿಸಿಎಂ ಅವರದ್ದೇ ಒಂದು ಪೆನ್ ಡ್ರೈವ್ ಇದೆ : ಯತ್ನಾಳ್ ಹೊಸ ಬಾಂಬ್

ಡಿಸಿಎಂ ಅವರದ್ದೇ ಒಂದು ಪೆನ್ ಡ್ರೈವ್ ಇದೆ : ಯತ್ನಾಳ್ ಹೊಸ ಬಾಂಬ್

ಬೀದರ್ :  ಡಿಸಿಎಂ ಅವರದ್ದೇ ಒಂದು ಪೆನ್ ಡ್ರೈವ್ ಇದೆ ಎಂದು ಹೇಳುವ ಮೂಲಕ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೈನ್ ಡ್ರೈವ್ ಕುರಿತು ಕೇಳಿದ ಪ್ರಶ್ನೆಗೆ ಬೀದರ್ ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪೆನ್ ಡ್ರೈವ್ ಬಗ್ಗೆ ಎಚ್‌ಡಿ ಕುಮಾರಸ್ವಾಮಿಗೆ ಗೊತ್ತಿದೆ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ ನೀಡಿದ್ರು.

ಡಿಸಿಎಂ ಅವರದ್ದೇ ಒಂದು ಪೆನ್ ಡ್ರೈವ್ ಇದೆ ಅಂತ ಯತ್ನಾಳ್ ಹೇಳಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ

ಇನ್ನು ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ ಡ್ರೈವ್‌ನ ವೈರಲ್ ವಿಡಿಯೋಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲ್ಲ. ಆದರೆ ಕಾನೂನು ಎಲ್ಲರಿಗೂ ಒಂದೇ, ಕಾನೂನು ಪ್ರಕಾರ ಕ್ರಮ ಆಗಲಿದೆ ಅಂತ ಹೇಳಿದ್ರುಹೇಳಿದ್ರು

ಈ ಎಲ್ಲ ಘಟನೆಗಳು ಕಾನೂನು ಚೌಕಟ್ಟಿನಲ್ಲಿ ಇರುತ್ತವೆ. ಯಾರು ತಪ್ಪು ಮಾಡಿದ್ರೂ ತಪ್ಪೇ. ಉಪ್ಪು ತಿಂದವ್ರು ನೀರು ಕುಡಿಯಲೇಬೇಕಷ್ಟೇ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಪ್ರತ್ರಿಕ್ರಿಯಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!