ಹಾಸನದಲ್ಲಿ ಅಶ್ಲೀಲ ವೀಡಿಯೋ ಸದ್ದು ; ಲೋಕಸಭಾ ಅಭ್ಯರ್ಥಿ ಆಯ್ಕೆ ವಿರೋಧಿಸಿ ಬರೆದ ರಹಸ್ಯ ಪತ್ರ ಬಯಲು..!
ಹಾಸನ ಜಿಲ್ಲಾ ರಾಜಕಾರಣದಲ್ಲಿ ಸಧ್ಯ ಅಶ್ಲೀಲ ವೀಡಿಯೋ ಸದ್ದು ಜೋರಾಗಿದೆ. ಸುಮಾರು 8 ಜಿಬಿ ಪೆಂಡ್ರೈವ್ ನಲ್ಲಿ ನೂರಾರು ಮಹಿಳೆ ಜೊತೆಗಿನ ಕಾಮದಾಟದ ವೀಡಿಯೋ ಇದೆ ಎಂದು ಬಯಲಾಗಿದೆ.
ಸಧ್ಯ ರಹಸ್ಯ ಪತ್ರ ಒಂದು ಬಯಲಿಗೆ ಬಂದಿದ್ದು ಟಿಕೆಟ್ ಹಂಚಿಕೆ ಪೂರ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬರೆದಿದ್ದ ಪತ್ರವೊಂದು ಭಾರೀ ವೈರಲ್ ಆಗುತ್ತಿದೆ. ಮೈತ್ರಿ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಒಬ್ಬರ ಕುರಿತು ಅನೇಕ ರಾಸಲೀಲೆ ವೀಡಿಯೋಗಳು ಇವೆ ಎಂಬುದನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ.
ನಡುವೆ ಭಾರತೀಯ ಜನತಾ ಪಕ್ಷದ ಸ್ಥಳೀಯ ಮುಖಂಡರಾದ ಜಿ.ದೇವರಾಜೇಗೌಡ ಎಂಬುವವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಬರೆದಿರುವ ರಹಸ್ಯ ಪತ್ರದ ಪ್ರತಿಯೊಂದು ಲಭ್ಯವಾಗಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು.
ಓರ್ವ ನಾಯಕನ ರಾಸಲೀಲೆಯ 2976 ವಿಡಿಯೋಗಳು ತಮ್ಮ ಬಳಿ ಇದ್ದು, ಈ ವಿಡಿಯೋಗಳ ಇನ್ನೊಂದು ಪೆನ್ ಡ್ರೈವ್ ಕಾಂಗ್ರೆಸ್ ನಾಯಕರ ಕೈ ಸೇರಿದೆ. ಹೀಗಾಗಿ ಈ ಅಭ್ಯರ್ಥಿ ಸ್ಪರ್ಧಿಸಿದರೆ ವಿಡಿಯೋಗಳು ಹೊರಗೆ ಬಂದು ಮೈತ್ರಿ ಪಕ್ಷಗಳಿಗೆ ಸೋಲಾಗುತ್ತದೆ. ಹೀಗಾಗಿ ಅವರಿಗೆ ಟಿಕೆಟ್ ನೀಡಬಾರದು ಎಂದು ಅವರು ಆ ಪತ್ರದಲ್ಲಿ ಬರೆದಿದ್ದಾರೆ.
ಒಟ್ಟಿನಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದು ಇತ್ತ ಮತ್ತೊಮ್ಮೆ ಅಶ್ಲೀಲ ವೀಡಿಯೋ ಕರ್ಮಕಾಂಡ ರಾಜ್ಯ ರಾಜಕಾರಣದ ಸುಳಿಯಲ್ಲಿ ಸಿಲಿಕಿದೆ. ಮುಂದೆ ಇದು ಯಾವ ಮಟ್ಟಿಗೆ ನಿಲ್ಲುತ್ತದೆ ಎಂಬುದು ಕಾಲವೇ ನಿರ್ಧರಿಸಲಿದೆ.

