ಬೆಂಗಳೂರು : ಬಿಗ್ ಬಾಸ್ ಕನ್ನಡ 10 ಪೈನಲ್ ಪ್ರವೇಶಿಸಿ ಎರಡನೇ ಸ್ಥಾನ ಪಡೆದ ಡ್ರೋಣ್ ಖ್ಯಾತಿಯ ಮಂಡ್ಯ ಮೂಲದ ಪ್ರತಾಪ್ ಅವರು ದೊಡ್ಮನೆಯಿಂದ ಹೊರ ಬಂದಿದ್ದಾರೆ.‌ ಕೊನೆಗೂ ಬಿಗ್ ಬಾಸ್ ನಲ್ಲಿ ಎರಡನೇ ಸ್ಥಾನ ಪಡೆದು ಸುಮಾರು 10 ಲಕ್ಷ ರೂ. ಗೆದ್ದಿದ್ದಾರೆ.

ಕಾರ್ಯಕ್ರಮ ಮುಕ್ತಾಯವಾದ ನಂತರ ಹೊರಗೆ ಅಭಿಮಾನಿಗಳ ಜೋಶ್ ಮುಗಿಲು ಮುಟ್ಟಿತ್ತು. ಕಾರ್ ನಲ್ಲಿ ಹೊರಡುತ್ತಿರುವಾಗಲೇ ಯುವಕರು ಸೆಲ್ಪಿಗಾಗಿ ಮುಗಿಬಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಡ್ರೊಣ್ ಪ್ರತಾಪ್. ಈ ಬಾರಿ ನನಗೆ ಬಂದ ಹಣವನ್ನು ಬಡ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರಿಗೆ ಸಹಾಯ ಮಾಡುವೆ ಎಂದಿದ್ದಾರೆ.

ಸುಮಾರು 10 ಲಕ್ಷದ ವರೆಗೆ ಹಣ ಗೆದ್ದಿರುವ ಡ್ರೋಣ್ ಪ್ರತಾಪ್ ತಮಗೆ ಬಂದ ಹಣದಲ್ಲಿ ಬಡ ಮಕ್ಕಳ ಆರೋಗ್ಯಕ್ಕೆ ಮೀಸಲಿಡುವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಸ್ಕೂಟರ್ ಒಂದನ್ನು ಗೆದ್ದಿದ್ದು ಇದನ್ನೂ ಬಡವರಿಗೆ ಕೊಡುವುದಾಗಿ ಹೇಳಿಕೊಂಡಿದ್ದಾರೆ.