Select Page

Advertisement

ಭಾರತ ಹಿಂದೂ ರಾಷ್ಟ್ರವಾದರೆ ದಿವಾಳಿ ಆಗಲಿಗೆ – ಯತೀಂದ್ರ ಸಿದ್ದರಾಮಯ್ಯ

ಭಾರತ ಹಿಂದೂ ರಾಷ್ಟ್ರವಾದರೆ ದಿವಾಳಿ ಆಗಲಿಗೆ – ಯತೀಂದ್ರ ಸಿದ್ದರಾಮಯ್ಯ

ದಾವಣಗೆರೆ : ನಮ್ಮ ದೇಶವನ್ನು ಹಿಂದು ರಾಷ್ಟ್ರಮಾಡಲಿಕ್ಕೆ ಹೊರಟಿದ್ದಾರೆ. ಆ ರೀತಿ ಹಿಂದೂ ರಾಷ್ಟ್ರ ಆದ್ರೆ ನಮ್ಮ ದೇಶವು ಪಾಕಿಸ್ಥಾನ ಆಪಘಾನಿಸ್ತಾನವಾಗುತ್ತದೆ. ಈಗಾಗಲೇ ಪಾಕಿಸ್ತಾನ ಮತ್ತು ಅಪಘಾನಿಸ್ತಾನ ಧರ್ಮದ ಹೆಸರಲ್ಲಿ ಸರ್ವಾಧಕಾರ ಮಾಡಿ ದಿವಾಳಿಯಾಗಿವೆ.

ಅದೇ ರೀತಿ ದೇಶ ಜಾತ್ಯಾತೀತ ತತ್ವ ಬಿಟ್ಟು ಧರ್ಮದ‌ ಹಿಂದೆ ಹೋದರೆ ಅಭಿವೃದ್ಧಿ ಕಾಣಲ್ಲ, ದಿವಾಳಿಯಾಗುತ್ತದೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆ ತಾಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವರು ನಮ್ಮ ದೇಶವನ್ನು ಹಿಂದು ರಾಷ್ಟ್ರಮಾಡಲಿಕ್ಕೆ ಹೊರಟಿದ್ದಾರೆ. ಆ ರೀತಿ ಹಿಂದೂ ರಾಷ್ಟ್ರ ಆದ್ರೆ ನಮ್ಮ ದೇಶವು ಪಾಕಿಸ್ತಾನ ಮತ್ತು ಅಪಘಾನಿಸ್ತಾನವಾಗುತ್ತದೆ.

ಪಾಕಿಸ್ತಾನ ಮತ್ತು ಅಪಘಾನಿಸ್ತಾನ ಧರ್ಮದ ಹೆಸರಲ್ಲಿ ಸರ್ವಾಧಕಾರ ಮಾಡಿ ದಿವಾಳಿಯಾಗಿವೆ. ದೇಶ ಜಾತ್ಯಾತೀತ ತತ್ವ ಬಿಟ್ಟು ಧರ್ಮದ‌ ಹಿಂದೆ ಹೋದರೆ ಅಭಿವೃದ್ಧಿ ಕಾಣಲ್ಲ. ಇವತ್ತು ಜಾತ್ಯಾತೀತ ತತ್ವಕ್ಕೆ ಅಪಾಯ ಬಂದಿದೆ. ಬಿಜೆಪಿ ಹಾಗೂ ಮಾತೃ ಸಂಸ್ಥೆ ಆರ್‌ಎಸ್‌ಎಸ್ ನಿಂದ ಜಾತ್ಯಾತೀತ ತತ್ವಕ್ಕೆ ಆಪಾಯ‌ ಬಂದಿದೆ. ಧರ್ಮದ ಮೇಲೆ ರಾಜಕೀಯ ಮಾಡುವ ಪಕ್ಷಗಳ ಬಗ್ಗೆ ನಾವು ಹುಷಾರಾಗಿರಬೇಕು ಎಂದು ಹೇಳಿದರು.

Advertisement

Leave a reply

Your email address will not be published. Required fields are marked *

error: Content is protected !!