Select Page

Advertisement

ನಿಮ್ಮ‌ ಮೊಬೈಲ್ ಗೆ Emergency alert ಕರೆ ಬಂದಿದ್ದು ಏಕೆ ಗೊತ್ತಾ….?

ನಿಮ್ಮ‌ ಮೊಬೈಲ್ ಗೆ Emergency alert ಕರೆ ಬಂದಿದ್ದು ಏಕೆ ಗೊತ್ತಾ….?

ಬೆಂಗಳೂರು : ಗುರುವಾರ ಮಧ್ಯಾಹ್ನ ದೇಶಾದ್ಯಂತ ಎಲ್ಲಾ ಮೊಬೈಲ್ ಗಳಿಗೆ ಒಂದು ಕರೆ ಬಂದಿತ್ತು Emergency alert ಎಂಬ ಕೆಂಪು ಗುರುತು ಹೊಂದಿರುವ ಕರೆ ಸೌಂಡ್ ಮೂಲಕ ಎಚ್ಚರಿಕೆ ನೀಡುತ್ತಿತ್ತು.

ಅನೇಕರು ಈ ರೀತಿಯ ಕರೆಯಿಂದ ನಮ್ಮ ಮೊಬೈಲ್ ಹಾಳಾಯಿತಾ ಎಂಬ ಗೊಂದಲಕ್ಕೆ ಸಿಲುಕಿದ್ದರು. ಆದರೆ ಇದು ಗೊಂದಲ ಮೂಡಿಸುವ ಕರೆ ಆಗಿರಲಿಲ್ಲ. ಸ್ಪಷ್ಟವಾಗಿ ಅಲ್ಲಿ ಕರೆ ಸಂದರ್ಭದಲ್ಲಿ ಎಲ್ಲ ಮಾಹಿತಿಯನ್ನು ನೀಡಲಾಗಿತ್ತು.

ಭಾರತದ ದೂರ ಸಂಪರ್ಕ ಇಲಾಖೆ ( DOT ) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋದಲ್ಲಿ  ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಬಹುದಾದ ಸೂಚನೆ ಬಗ್ಗೆ ಅಕ್ಟೋಬರ್ 12 ರ ಮಧ್ಯಾಹ್ನ ಪ್ರಾಯೋಗಿಕ ಪರೀಕ್ಷೆ ನಡೆಸಿದೆ.

ಧ್ವನಿ ಮತ್ತು ಕಂಪನದೊಂದಿಗೆ ಎಲ್ಲರ ಮೊಬೈಲ್ ಗೆ ಕರೆ ಬಂದಿದೆ. ತುರ್ತು ಸಂದರ್ಭದಲ್ಲಿ ಜನರನ್ನು ಎಚ್ಚರಿಸುವ ಉದ್ದೇಶದಿಂದ ಈ ಪ್ರಕ್ರಿಯೆ ನಡೆದಿದ್ದು ಜನ ಇದನ್ನು ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ದೂರ ಸಂಪರ್ಕ ಇಲಾಖೆ ತಿಳಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!