ನಾನು ಸನಾತನ ಧರ್ಮದವನು ; ಉದಯನಿಧಿಗೆ ಎಎಪಿ ಸಂಸದನ ತಿರುಗೇಟು
ದೆಹಲಿ : ಸನಾತನ ಧರ್ಮ ನಿರ್ಮೂಲನೆ ಮಾಡಲು ಕರೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡನೀಯ. ನಾನು ಒಬ್ಬ ಸನಾತನ ಧರ್ಮಧವನು, ಆ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಆಮ್ ಆದ್ಮಿ AAP ಪಕ್ಷದ ಸಂಸದ ರಾಘವ್ ಚಡ್ಡಾ ( Raghav Chadda ) ಹೇಳಿಕೆ ನೀಡಿದ್ದಾರೆ.
ರಾಜಕೀಯ ಪಕ್ಷಗಳು ಏನೇ ಹೇಳಿಕೆ ನೀಡಿದರೆ ಅದನ್ನು ಇಂಡಿಯಾ ಒಕ್ಕೂಟ ಬೆಂಬಲಿಸುತ್ತದೆ ಎಂಬುದು ಅಲ್ಲ.
ನಾನು ಸನಾತನ ಧರ್ಮದಿಂದ ಬಂದವನು ಆ ರೀತಿಯ ಹೇಳಿಕೆ ವಿರೋಧಿಸುತ್ತೇನೆ. ಎಲ್ಲಾ ಧರ್ಮವನ್ನು ಗೌರವಿಸಬೇಕು ಎಂದಿದ್ದಾರೆ.
ಮತ ಪಡೆಯಲು ಇಂಡಿಯಾ ಒಕ್ಕೂಟ ಸನಾತನ ವಿರುದ್ಧ ಅವಹೇಳನವಾಗಿ ಮಾತನಾಡುತ್ತಿದೆ ಎಂದು ಬಿಜೆಪಿ ಟೀಕೆ ಮಾಡುತ್ತಿದೆ. ಜೊತೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.


