ಜೆಡಿಎಸ್ ಅಧ್ಯಕ್ಷನ ಅಶ್ಲೀಲ ಪೋಟೋ ವೈರಲ್ ; ಕಾಮದಾಟ ಬಯಲು
ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಜೆಡಿಎಸ್ ಪಕ್ಷದ ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷನ ಅಶ್ಲೀಲ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜೆಡಿಎಸ್ ಪಕ್ಷದ ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಲೀಂ ಕಾಕರಗಲ್ ಎಂಬುವವರದ್ದು ಎನ್ನಲಾದ ರಾಸಲೀಲೆಯ ಪೋಟೋ ಹಾಗೂ ವೀಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. (JDS Devadurga)
ಸುಮಾರು ಮೂರು ಯುವತಿಯರ ಜೊತೆ ಅಶ್ಲೀಲ ಭಂಗಿಯಲ್ಲಿ ಅನೇಕ ಪೋಟೋ ಹಾಗೂ ವೀಡಿಯೋ ಹೊರಬಿದ್ದಿವೆ. ಸಧ್ಯ ಸ್ಥಳೀಯವಾಗಿ ಜಿಡಿಎಸ್ ಪಕ್ಷದ ಶಾಸಕರೇ ಅಧಿಕಾರದಲ್ಲಿದ್ದು ಈ ಸಂದರ್ಭದಲ್ಲಿ ಮುಖಂಡನ ಅಶ್ಲೀಲ ಪೋಟೋ ಬಂದಿದ್ದು ಎಲ್ಲರನ್ನೂ ಮುಜುಗರಕ್ಕೆ ಈಡಾಗಿಸಿದೆ. ( Sex Scandal )
ಕಳೆದ ಕೆಲ ದಿನಗಳಿಂದ ಈ ಪೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಕುರಿತು ಜೆಡಿಎಸ್ ಮುಖಂಡ ಯಾವುದೇ ಹೇಳಿಕೆ ನೀಡಿಲ್ಲ.
ಹಾಸ್ಟೆಲ್ ವಿದ್ಯಾರ್ಥಿನಿಯರೇ ಈತನ ಟಾರ್ಗೆಟ್ :
ಜೆಡಿಎಸ್ ಮುಖಂಡನ ಖಾಸಗಿ ಪೋಟೋ ಹಾಗೂ ವೀಡಿಯೋ ವೈರಲ್ ಆಗುತ್ತಿದ್ದು, ದೇವದುರ್ಗ ಪಟ್ಟಣದ ಲಾಡ್ಜ್ ಗಳನ್ನೇ ಈತ ಖಾಸಗಿ ಅಡ್ಡಾ ಆಗಿ ಮಾಡಿಕೊಂಡಿದ್ದ ಎಂಬ ಮಾಹಿತಿ ಬಯಲಾಗಿದೆ.
ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಈತ ಟಾರ್ಗೆಟ್ ಮಾಡಿ ಅವರನ್ನು ಲಾಡ್ಜ್ ಗೆ ಕರೆತರುತ್ತಿದ್ದ. ಬ್ಲಾಕ್ ಮೇಲ್ ಮಾಡಿ ಹುಡುಗಿಯರ ಜೊತೆ ಶೋಕಿ ಮಾಡುವುದು ಈತನ ಕಯಾಲಿ ಆಗಿತ್ತು ಎಂಬುದು ತಿಳಿದುಬರುತ್ತಿದೆ.
ಸುಮಾರು ನಾಲ್ಕು ಹುಡುಗಿಯರ ಜೊತೆ ಇರುವ ಅಶ್ಲೀಲ ಪೋಟೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವತಿಯರನ್ನು ಟಾರ್ಗೆಟ್ ಮಾಡುವುದೇ ಈತನ ಕೆಲಸ ಆಗುತ್ತು ಎಂಬುದು ತಿಳಿದುಬಂದಿದೆ.


