Select Page

Advertisement

ಚಿಕ್ಕೋಡಿ : ಮದುವೆ ಊಟ ಸೇವಿಸಿ 100 ಕ್ಕೂ ಅಧಿಕ ಜನ ಅಸ್ವಸ್ಥ

ಚಿಕ್ಕೋಡಿ : ಮದುವೆ ಊಟ ಸೇವಿಸಿ 100 ಕ್ಕೂ ಅಧಿಕ ಜನ ಅಸ್ವಸ್ಥ

ಚಿಕ್ಕೋಡಿ : ಮದುವೆ ಮನೆಯಲ್ಲಿ ಮಾಡಿದ್ದ ಮಾಂಸಾಹಾರ ಊಟ ಸೇವಿಸಿ ಸುಮಾರು 100 ಕ್ಕೂ ಅಧಿಕ ಜನ ಅಸ್ವಸ್ಥರಾದ ಘಟನೆ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಾಕಿರ್ ಪಟೇಲ್ ಎಂಬುವವರ ಮಗಳ‌ ಮದುವೆ ಸಮಾರಂಭದಲ್ಲಿ ಈ ಘಟನೆ ಜರುಗಿದ್ದು ಸಸ್ಯಾಹಾರ ಹಾಗೂ ಮಾಂಸಾಹಾರ ಊಟ ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಂಸಾಹಾರ ಊಟ ಸೇವಿಸಿದ್ದ ನೂರಕ್ಕೂ ಅಧಿಕ ಜನ ಅಸ್ವಸ್ಥರಾಗಿದ್ದಾರೆ.

ಈಗಾಗಲೇ ಅಸ್ವಸ್ಥಗೊಂಡವರನ್ನು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಗಂಭೀರವಾಗಿರುವವರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆ ಹಾಗೂ ಮಿರಜ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸ್ಥಳಕ್ಕೆ ಚಿಕ್ಕೋಡಿ ಡಿಎಸ್ಪಿ ಗೌಡರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Advertisement

Leave a reply

Your email address will not be published. Required fields are marked *

error: Content is protected !!