Select Page

Advertisement

ಬೆಳಗಾವಿ : 23 ಬೈಕ್ ಕದ್ದ ಇಬ್ಬರು ಐನಾತಿ‌ ಕಳ್ಳರ ಬಂಧಿಸಿದ ಪೊಲೀಸರು 

ಬೆಳಗಾವಿ : 23 ಬೈಕ್ ಕದ್ದ ಇಬ್ಬರು ಐನಾತಿ‌ ಕಳ್ಳರ ಬಂಧಿಸಿದ ಪೊಲೀಸರು 

ಬೆಳಗಾವಿ : ಗೋಕಾಕ್ ತಾಲೂಕಿನ ಹಲವೆಡೆ ಮನೆಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ‌ ಮಾಡುತ್ತಿದ್ದ ಇಬ್ಬರನ್ನು ಸೇರಿ 23 ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ  ಸಿಪಿಐ ಗೋಪಾಲ್ ರಾಠೋಡ ನೇತೃತ್ವದ ತಂಡ ಯಶಸ್ವಿಯಾಗಿದೆ. 

ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸುಮಾರು 8 ಲಕ್ಷ ಮೌಲ್ಯದ 23 ಬೈಕ್ ಕಳ್ಳತನ‌ ಮಾಡಿದ್ದ ಕೊಲ್ಹಾಪುರದ ಸಂತೋಷ್ ನಿಶಾನೆ (30) ಹಾಗೂ ಗೋಕಾಕ್ ತಾಲೂಕಿನ ಭರಮಪ್ಪ ಕೋಪ್ಪದ (21) ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಗೋಕಾಕ್ ಹಾಗೂ ಅಂಕಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಪತ್ತೆ ಹಚ್ಚಲು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಮಾರ್ಗದರ್ಶನದಲ್ಲಿ ಗೋಕಾಕ್ ಸಿಪಿಐ ಗೋಪಾಲ್ ರಾಠೋಡ ನೇತೃತ್ವದ ತಂಡ ರಚನೆ ಮಾಡಲಾಗಿತ್ತು. 

ಈ ಕಾರ್ಯಾಚರಣೆಯಲ್ಲಿ ಅಂಕಲಿ ಪಿಎಸ್ಐ ಹೆಚ್.ಡಿ ಯರಝರ್ವಿ, ಗೋಕಾಕ್ ಪಿಎಸ್ಐ ಎಂ.ಡಿ ಘೋರಿ, ಕಿರಣ ಮೋಹಿತೆ ಸೇರಿದಂತೆ ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ಡಾ. ಸಂಜೀವ್ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!