Select Page

Advertisement

ಸೌಜನ್ಯ ಪ್ರಕರಣ ಮರುತನಿಖೆ ಸಾಧ್ಯವಿಲ್ಲ – ಗೃಹ ಸಚಿವ ಪರಮೇಶ್ವರ

ಸೌಜನ್ಯ ಪ್ರಕರಣ ಮರುತನಿಖೆ ಸಾಧ್ಯವಿಲ್ಲ – ಗೃಹ ಸಚಿವ ಪರಮೇಶ್ವರ

ಧಾರವಾಡ : ಸೌಜನ್ಯ ಪ್ರಕರಣ ಕಾನೂನಾತ್ಮಕವಾಗಿ ಮುಗಿದಿದೆ. ಇದರ ಮರು ತನಿಖೆ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆದರೆ ಸರ್ಕಾರದಿಂದ ಯಾವುದೇ ರೀತಿಯ ಮರು ತನಿಖೆ ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು.‌

ಧಾರವಾಡದಲ್ಲಿ ಸೌಜನ್ಯ ಪ್ರಕರಣದ ಕುರಿತು ಸುದ್ದಿಗಾರರ ಪ್ರಶ್ನೆಗೆ ಮಾತನಾಡಿದ ಇವರು. ಸೌಜನ್ಯ ಪ್ರಕರಣ ಕಾನೂನಾತ್ಮಕವಾಗಿ ಮುಗಿದು ಹೋಗಿದೆ. 

ಸಾರ್ವಜನಿಕರ ವಲಯದಲ್ಲಿ ಪರ ವಿರೋಧ ಇದ್ದೆ ಇರುತ್ತದೆ.ಈಗಾಗಲೇ ಈ ಪ್ರಕರಣ ಮುಗಿದು ಹೋಗಿದ್ದು ಮರು ತನಿಖೆ ಸಾಧ್ಯವಿಲ್ಲ ಎಂದು ಹೇಳಿದರು. 

ಈ ಪ್ರಕರಣ ಕುರಿತು ಸರ್ಕಾರ ಏನು ಮಾಡಲು ಸಾಧ್ಯವಿಲ್ಲ. ಈಗಾಗಲೇ ಕಾನೂನಾತ್ಮಕವಾಗಿ ಸೌಜನ್ಯ ಕೊಲೆ ಪ್ರಕರಣ ಮುಕ್ತಾಯವಾಗಿದ್ದು ಸಾರ್ವಜನಿಕ ವಲಯದಲ್ಲಿ ಕೆಲ ಗೊಂದಲ ಇರುವುದು ಸತ್ಯ. ಆದರೆ ಈ ಕುರಿತು ಸರ್ಕಾರ ಯಾವ ನಡೆಯನ್ನು ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಸೌಜನ್ಯ ಪ್ರಕರಣ ಮರು ತನಿಖೆಯಾಗಬೇಕು ಎಂದು ರಾಜ್ಯಾದ್ಯಂತ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದೆ. ಪ್ರಕರಣದಲ್ಲಿ ಅಮಾಯಕನಿಗೆ ಶಿಕ್ಷೆ ಯಾಗಿದ್ದು ಬಿಟ್ಟರೆ ಆರೋಪಿತರು ಈವರೆಗೂ ಕಾನೂನಿನ ಕೈಗೆ ಸಿಕ್ಕಿಲ್ಲ. ಸೌಜನ್ಯ ಪ್ರಕರಣ ಮರು ತನಿಖೆ ಆಗಬೇಕು ಎಂಬುದು ಕೆಲವರ ವಾದ.

Advertisement

Leave a reply

Your email address will not be published. Required fields are marked *

error: Content is protected !!