ಬೆಂಗಳೂರು : ಹಾಡಹಗಲೇ ವ್ಯಕ್ತಿಯೋರ್ವ ಅಟ್ಟಹಾಸ ಮೆರೆದಿದ್ದು ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕೊಲೆಯಾದ ಮೃತ ದುರ್ದೈವಿಯನ್ನು ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್  ಫಣೀಂದ್ರ ಸುಬ್ರಮಣ್ಯ ಹಾಗೂ ಸಿಇಒ ವಿನು ಕುಮಾರ್ ಎನ್ನಲಾಗಿದೆ. ಬೆಂಗಳೂರಿನ ಅಮೃತಹಳ್ಳಿಯಲ್ಲಿ ಘಟನೆ ನಡೆದಿದ್ದು, ಫೆಲಿಕ್ಸ್‌ ಎಂಬಾತ ಈ ಕೃತ್ಯ ನಡೆಸಿದ್ದಾನೆ ಎಂದು ಶಂಕಿಸಲಾಗಿದೆ

ಕೊಲೆ ಮಾಡಿದ ಆರೋಪಿ ಎಂದು ಹೇಳಲಾಗುತ್ತಿರುವ ಫೆಲಿಕ್ಸ್, ಏರೋನಿಕ್ಸ್ ಸಂಸ್ಥೆಯ ಹಳೆ ಉದ್ಯೋಗಿ. ಏರೋನಿಕ್ಸ್‌ ಕಂಪನಿಯನ್ನು ಬಿಟ್ಟುಹೋದ ನಂತರ ಆತನೇ ಸ್ವಂತ ಕಂಪನಿ ಸ್ಥಾಪನೆ ಮಾಡಿದ್ದ.

ಆದರೆ, ತನ್ನ ಉದ್ಯಮಕ್ಕೆ ಫಣೀಂದ್ರನೇ ಎದುರಾಳಿ ಎಂದು ಭಾವಿಸಿದ್ದ ಫೆಲಿಕ್ಸ್‌, ಆತನನ್ನು ಹೇಗಾದರೂ ಮಾಡಿ ತನ್ನ ದಾರಿಯಿಂದ ಹೊರಹಾಕಬೇಕು ಎಂದು ಯೋಜನೆ ರೂಪಿಸಿದ್ದ. ಇದಕ್ಕಾಗಿ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್  ಫಣೀಂದ್ರ ಸುಬ್ರಮಣ್ಯ ಕೊಲೆಗೆ ಸಂಚು ರೂಪಿಸಿದ್ದ.

ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಏರೋನಿಕ್ಸ್‌ ಕಂಪನಿಗೆ ಎಂಟ್ರಿಕೊಟ್ಟ ಫೆಲಿಕ್ಸ್‌, ತಲ್ವಾರ್ ಮತ್ತು ಚಾಕುವಿನಿಂದ ಫಣೀಂದ್ರ ಹಾಗೂ ವಿನುಕುಮಾರ್ ಮೇಲೆ ದಾಳಿ ಮಾಡಿದ್ದಾನೆ. ತನ್ನ ಸಂಚಿನಂತೆ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದಾನೆ