Select Page

ಪಬ್ ಪಾರ್ಟಿ ; ಮಹಿಳೆಯರಿಗೆ ಮದ್ಯ ಉಚಿತ – ಗ್ರಾಹಕರನ್ನು ಸೆಳೆಯಲು ವಿಭಿನ್ನ ಪ್ರಯತ್ನ

ಪಬ್ ಪಾರ್ಟಿ ; ಮಹಿಳೆಯರಿಗೆ ಮದ್ಯ ಉಚಿತ – ಗ್ರಾಹಕರನ್ನು ಸೆಳೆಯಲು ವಿಭಿನ್ನ ಪ್ರಯತ್ನ

ಬೆಂಗಳೂರು : ಮಹಾನಗರಗಳಲ್ಲಿ ಪಬ್ ಹಾಗೂ ಬಾರ್ ಮತ್ತು ರೆಸ್ಟೊರೆಂಟ್ ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಮದ್ಯ ನೀಡುವ ನಿರ್ಧಾರಕ್ಕೆ ಮಾಲಿಕರು ಮುಂದಾಗಿದ್ದಾರೆ.

ಹೌದು‌ ಬೆಂಗಳೂರಿನ ಕೋರಮಂಗಲ, ಇಂದಿರಾ ನಗರ, ಬ್ರಿಗೇಡ್ ರಸ್ತೆ, ಸೇರಿದಂತೆ ಹಲವೆಡೆ ಪಬ್ ಗಳು ತಲೆ ಎತ್ತುತ್ತಿವೆ. ಸಧ್ಯ ನೂರಾರು ಲೆಕ್ಕದಲ್ಲಿ ಪಬ್ ಗಳಿವೆ. ಸಧ್ಯ ವಾರಾಂತ್ಯದಲ್ಲಿ ಗ್ರಾಹಕರನ್ನು ಸೆಳೆಯಲು ಪಬ್ ಮಾಲಿಕರು ಹೊಸ ಬಗೆಯ ಪ್ಯ್ಲಾನ್ ಮಾಡಿಕೊಳ್ಳುತ್ತಿದ್ದಾರೆ.

ಕೊರೋನಾ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಧ್ಯ ಪಬ್ ಗಳಲ್ಲಿ ಮಹಿಳೆಯರಿಗೆ ಉಚಿತ ಎಣ್ಣೆ ನೀಡಲು ಮುಂದಾಗುತ್ತಿದ್ದಾರೆ. ಇದರಿಂದ ಪುರುಷ ಗ್ರಾಹಕರು ಬರುತ್ತಾರೆ ಎಂಬ ಕಾರಣಕ್ಕೆ ಈ ಹೊಸ ಐಡಿಯಾಗೆ ಪಬ್ ಮಾಲಿಕರು ಇಳಿದಿದ್ದಾರೆ.

ಸಾಮಾನ್ಯವಾಗಿ ವಾರಾಂತ್ಯದಲ್ಲಿ ಕೆಲ ಸಮಯ ರಿಲ್ಯಾಕ್ಸ್ ಮೂಡ್ ನಲ್ಲಿ ಕಳೆಯಲು ಬಯಸುವವರು ಪಬ್ ಗಳತ್ತ ಮುಖ ಮಾಡುವುದು ಸಹಜ. ಈ ಹಿನ್ನಲೆಯಲ್ಲಿ ಜನರನ್ನು ತನ್ನತ್ತ ಸೆಳೆಯಲು ಪಬ್ ಮಾಲಿಕರು ಮಹಿಳೆಯರಿಗೆ ಉಚಿತ ಮದ್ಯ ಪೂರೈಸುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!