Select Page

Advertisement

ತಲೆಮೇಲೆ‌ ಕಲ್ಲು ಹಾಕಿ ಪತ್ನಿಯನ್ನು ಕೊಲೆಗೈದ ಗಂಡ

ತಲೆಮೇಲೆ‌ ಕಲ್ಲು ಹಾಕಿ ಪತ್ನಿಯನ್ನು ಕೊಲೆಗೈದ  ಗಂಡ

ಕುಡಚಿ : ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಪತ್ನಿಯ ತಲೆಗೆ ಮೇಲೆ‌ ಕಲ್ಲು ಹಾಕಿ ಕೊಲೆಗೈದ ಭೀಕರ ಘಟನೆ ಹಾರೂಗೇರಿ ಪಟ್ಟಣದಲ್ಲಿ ನಡೆದಿದೆ.

ಆರೋಪಿ ಮಲ್ಲಪ್ಪ ಉಪ್ಪಾರ ಎಂಬಾತ ಮನೆಯಲ್ಲಿ ಮಲಗಿದ್ದ ಪತ್ನಿ ಮೇಲೆ ಕಲ್ಲು ಹಾಕಿದ ಪರಿಣಾಮ ರುಕ್ಮವ್ವಾ ಉಪ್ಪಾರ (29) ಎಂಬುವವರು ಕೊಲೆಯಾದ ದುರ್ದೈವಿ.

ಘಟನಾ ಸ್ಥಳಕ್ಕೆ ಹಾರೂಗೇರಿ ಪೊಲೀಸ್ ಠಾಣೆ ಸಿಪಿಐ ರವಿಚಂದ್ರ ಡಿ. ಬಿ, ಪಿಎಸ್ಐ ಗಿರಿಮಲ್ಲಪ್ಪಾ ಉಪ್ಪಾರ, ಕ್ರೈಮ್ ಪಿಎಸ್ಐ ಚಾoದಬಿ ಗಂಗಾವತಿ, ಸ್ಥಳಕ್ಕೆ ‌ಭೇಟಿ ನೀಡಿ‌ ಪರಿಶೀಲನೆ ನಡೆಸಿದರು.

ಆರೋಪಿ ಮಲ್ಲಪ್ಪ ಉಪ್ಪಾರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೃತ ಮಹಿಳೆ ಶವವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!