Select Page

Advertisement

ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಟ್ಟ ಉಡುಗೊರೆ ವಿಶೇಷ ಏನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಟ್ಟ ಉಡುಗೊರೆ ವಿಶೇಷ ಏನು ಗೊತ್ತಾ?

ಕುಡಚಿ : ಮೊದಲಬಾರಿ ಕುಡಚಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾವಯವ ಬೆಲ್ಲದಲ್ಲಿ ಮಾಡಿದ್ದ ನರೇಂದ್ರ ಮೋದಿ ಮೂರ್ತಿ ನೀಡಿ ಗೌರವಿಸಲಾಯಿತು‌. ಸಂಸದ ಈರಣ್ಣ ಕಡಾಡಿ ಹಾರ ಹಾಕಿದರೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಪೇಟ ತೊಡಿಸಿದರು. ಕುಡಚಿ ಶಾಸಕ ಪಿ. ರಾಜೀವ್ ಹಾಗೂ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಬೆಲ್ಲದ ಮೂರ್ತಿ ನೀಡಿ ಗೌರವಿಸಿದರು.

ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿತ್ತು : ಈ ಹಿಂದೆ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದನು ಯಾರು ಮರೆಯುವುದಿಲ್ಲ. ಡಿಕ್ಷನರಿಯಲ್ಲಿ ಇರುವ ಎಲ್ಲಾ ಪದಗಳನ್ನು ಬಳಸಿ ಅತ್ಯಂತ ಕೆಟ್ಟ ರೀತಿಯಲ್ಲಿ ಅವಮಾನ ಎಸಗಿತ್ತು. ದೇಶದ್ರೋಹಿ, ಕಟುಕ ಎಂಬಿತ್ಯಾದಿ ಕೆಟ್ಟ ಶಬ್ದ ಬಳಸಿತ್ತು. ಜೊತೆಗೆ ದಲಿತರ ಅಭಿವೃದ್ಧಿಯನ್ನು ಕಾಂಗ್ರೆಸ್ ಕಡೆಗಣನೆ ಮಾಡಿತ್ತು, ಆದರೆ ಬಿಜೆಪಿ ದಲಿತರು ಹಾಗೂ ಹಿಂದುಳಿದ ವರ್ಗದ ಜನರ ಅಭಿವೃದ್ಧಿ ಮಾಡಿದೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!