ಬೆಳಗಾವಿ : ಮಳೆ ಕೊರತೆ, ಕೀಟ ಬಾಧೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳ ನಡುವೆಯೂ ರೈತನೋರ್ವ ಒಂದು ಎಕರೆಗೆ ಜಮೀನಿನಲ್ಲಿ 117.23 ಟನ್ ಕಬ್ಬು ಬೆಳೆಯುವ ಮೂಲಕ ಜಿಲ್ಲೆಯ ಗಮನಸೆಳೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ರೈತ ಶೇಖರ ಮಕಾಶಿ ಎಂಬ ರೈತ ಈ ಸಾಧನೆ ಮಾಡಿದ್ದಾರೆ. ಇವರ ಒಟ್ಟು 1 ಎಕರೆ 25 ಗುಂಟೆ ಜಮೀನಿನಲ್ಲಿ ಒಟ್ಟು 190 ಟನ್ 503 ಕೆಜಿ ಕಬ್ಬು ಇಳುವರಿ ಬಂದಿದೆ. ಎಕರೆಗೆ ಸರಾಸರಿ 117.23 ಟನ್ ಬೆಳೆ ಬಂದಿದೆ.

ತಮ್ಮ ಸಾಧನೆ ಕುರಿತು ಪ್ರತಿಕ್ರಿಯೆ ನೀಡಿದ ರೈತ ಶೇಖರ ಮಕಾಶಿ. ಈ ಬಾರಿ ಮಳೆ ಕೊರತೆ ಇದ್ದರು ಬೆಳೆಗೆ ಕೊಂಚ ಉತ್ತಮ ವಾತಾವರಣ ಇತ್ತು. ಸರಿಯಾದ ಪ್ರಮಾಣದಲ್ಲಿ ರಸಗೊಬ್ಬರ ಹಾಗೂ ನೀರನ್ನು ಬೆಳೆಗೆ ನೀಡಿದ್ದೇವು. ಜೊತೆಗೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಸಮರ್ಪಕ ‌ಪೋಶಕಾಂಶ ನೀಡಿದ್ದಕ್ಕಾಗಿ ಈ ಬಾರಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ. ನಮ್ಮ ಇಬ್ಬರು ಪುತ್ರರಾದ ರಮೇಶ್ ಹಾಗೂ ಮಹೇಶ್ ಮಕಾಶಿ ಅವರ ಪ್ರಯತ್ನವೂ ಸಾಕಷ್ಟಿದೆ ಎಂದರು.

ಎಕರೆಗೆ 40 ರ ಆಸುಪಾಸಿನಲ್ಲಿ ಕಬ್ಬು ಬೆಳೆಯುತ್ತಿದ್ದ ಈ ಪ್ರದೇಶದಲ್ಲಿ ಈಗ ನೂರಕ್ಕೂ ಅಧಿಕ ಟನ್ ಕಬ್ಬು ಬೆಳೆಯಲಾಗುತ್ತಿರುವುದು ರೈತರ ಇನ್ನೊಂದು ವಿಶೇಷವಾಗಿದೆ. ಸಧ್ಯ ಇವರ ಸಾಧನೆಗೆ ಗ್ರಾಮಸ್ಥರು ಹಾಗೂ ರೈತರಿಗೆ ಮೆಚ್ಚುಗೆ ವ್ಯಕ್ತವಾಗಿದೆ.