ಚನ್ನಮ್ಮನ ಕಿತ್ತೂರು : ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮನ 202ನೇ ವಿಜಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಪವನ್ ಆಂಗ್ಲ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹಾಗೂ ಶ್ರೀ ವೀಣಾ ವಾಣಿ ಸಂಗೀತ ಪಾಠ ಶಾಲೆಯ ಆಧ್ಯಾ ರಾಜಶೇಖರಯ್ಯ ಹಿರೇಮಠ ಸಂಗೀತ ಗೀತೆ ಹಾಡಿ ಗಮನ ಸೆಳೆದರು.
ಬಳಿಕ ಶ್ರೀ ವೀಣಾ ವಾಣಿ ಸಂಗೀತ ಪಾಠ ಶಾಲೆಯ ಡಾ. ಎಸ್.ಎಸ್. ಮೇಡೆದಾರ ತಂಡದಿಂದ ವಚನ ಗೀತೆ ಹಾಡಿ ಪ್ರೇಕ್ಷಕರನ್ನು ಮನಸೂರೆಗೊಳಿಸಿದರು. ಸುಮಧುರವಾಗಿ ವಚನ ಗಾಯನ ಹಾಗೂ ಸಂಗೀತ ಗೀತೆ ಹಾಡಿದ ತಂಡಕ್ಕೆ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಯಮಕನಮರಡಿ ಸಿಪಿಐ ಜಾವೇದ ಮುಷಾಪುರೆ, ಪತ್ರಕರ್ತರಾದ ಮೆಹಬೂಬ್ ಮಕಾನದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




