ಬೆಳಗಾವಿ : ಅಕ್ರಮ ಆಸ್ತಿ ಸಂಗ್ರಹ ಹಾಗೂ ಭ್ರಷ್ಟಾಚಾರ ಆರೋಪ ಹೊತ್ತ ನಿಪ್ಪಾಣಿ ತಹಶಿಲ್ದಾರ ಸುರೇಶ್ ಮುಂಜೆ ಮನೆ ಹಾಗೂ ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡಿಸಿ ಪರಿಶೀಲನೆ ನಡೆಸಿದರು.
ಬೆಳಗಾವಿ ಲೋಕಾಯುಕ್ತ ಎಸ್ಪಿ ಪ್ರಸನ್ನ ದೇಸಾಯಿ ನೇತೃತ್ವದ ಅಧಿಕಾರಿಗಳ ತಂಡ ತಹಶಿಲ್ದಾರ ಸುರೇಶ್ ಮುಂಜೆ ಅವರ ನಿಪ್ಪಾಣಿ ಕಚೇರಿ, ಹಾಗೂ ಅಥಣಿಯಲ್ಲಿರುವ ಮನೆ ಸೇರಿದಂತೆ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಮುಂಜೆ ಅವರ ಪತ್ನಿ ಸ್ವಾತಿ ಅವರ ತವರು ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನಲ್ಲಿರುವ ಸಾತ್ವಿ ತಂದೆ ಶಿವಬಸು ಬಾಳಪ್ಪ ಹಂದಿಗುಂದ ಅವರ ಮನೆ ಹಾಗೂ ಇವರು ಸಂಪರ್ಕ ಹೊಂದಿರುವ ಶ್ರೀ ನಾಗಲಿಂಗೇಶ್ವರ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ’ ಮೇಲೆಯೂ ಲೋಕಾಯುಕ್ತ ತಂಡ ದಾಳಿ ನಡೆಸಿ, ಮಹತ್ವದ ಆಸ್ತಿ ಪಾಸ್ತಿ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆ.




