ಅಥಣಿ: ಭರವಸೆ ಬೆಳಕು ಫೌಂಡೇಶನ್, ಅಥಣಿ ಗಾಂಧಿ ಗ್ರಾಮೀಣ ಗುರುಕುಲ ಅಥಣಿ ಇವರ ಸಹಯೋಗದಲ್ಲಿ ಜಾಗತಿಕ ಸ್ತನಪಾನ ಸಪ್ತಾಹದ ಅಂಗವಾಗಿ “ತಾಯಿಯ ಎದೆ ಹಾಲು ಸೇವನೆಯ ಮಹತ್ವ ಕುರಿತು ಉಪನ್ಯಾಸ” ಕಾರ್ಯಕ್ರಮವನ್ನು ಬುಧವಾರ ಅಥಣಿಯ ಭರವಸೆ ಬೆಳಕು ಫೌಂಡೇಶನ್ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟಕರಾಗಿ ಮತ್ತು ವಿಶೇಷ ಉಪನ್ಯಾಸಕರಾಗಿ ಡಾ. ಕಾಮಾಕ್ಷಿ ಭಾಟಿ ಅವರು ತಾಯಿಯ ಎದೆಹಾಲಿನ ಮಹತ್ವ, ಶಿಶುವಿನ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಸ್ತನಪಾನದ ಪಾತ್ರ, ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯ ಹಾಗೂ ಸ್ತನಪಾನದ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಬಗ್ಗೆ ಜಾಗೃತಿ ಮೂಡಿಸಿದರು.

ಸಂಸ್ಥೆಯ ಅಧ್ಯಕ್ಷೆ ರೂಪಾ ಕಾಂಬಳೆ ಮಾತನಾಡಿ. ತಾಯಿ ಮತ್ತು ಮಗುವಿನ ಆರೋಗ್ಯಕರ ಭವಿಷ್ಯಕ್ಕಾಗಿ ಎದೆಹಾಲಿನ ಮಹತ್ವವನ್ನು ಪ್ರತಿಯೊಬ್ಬ ತಾಯಿ ಹಾಗೂ ಕುಟುಂಬದವರಿಗೆ ತಲುಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು, ತಾಯಂದಿರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕಿ ಬಿ.ಬಿ. ವಾಲಿ, ವಿಶೇಷ ಆಹ್ವಾನಿತರಾಗಿ ಶ್ರೀಮತಿ ಗೀತಾ ಮಡ್ಡಿ, ಅಧ್ಯಕ್ಷರು, ಮಹಾನಾಯಕ ಕ್ಷೇಮಾಭಿವೃದ್ಧಿ ಸಂಘ, ಅಥಣಿ ಹಾಗೂ ಡಾ. ಭಾರತಿ ಬಿಜಾಪುರ, ಕಾರ್ಯಕ್ರಮ ನಿರ್ವಹಕರು, ಗಾಂಧಿ ಗ್ರಾಮೀಣ ಗುರುಕುಲ, ಅಥಣಿ ಅವರು ಉಪಸ್ಥಿತರಿರುವರು.