ಬೆಳಗಾವಿ : ಅವರದ್ದು ಪುಟ್ಟ ಸಂಸಾರ, ಜಾತಿ ಮೀರಿ ಮದುವೆಯಾದ ಜೋಡಿಗಳಿಗೆ ಎರಡು ಮುದ್ದಾದ ಹೆಣ್ಣು ಮಕ್ಕಳಿದ್ದವು. ಆದರೆ ಸಂಸಾರದ ಜವಾಬ್ದಾರಿ ಹೊರಬೇಕಿದ್ದ ಪತಿ ಮೊದಲ ಹೆಣ್ಣು ಮಗು ಕೊಲೆ ಮಾಡಿ ಜೈಲು ಸೇರಿ ಎರಡನೇ ಮಗುವಿನ ಜೀವನಕ್ಕಾಗಿ ತಾಯಿ ಗದಗನಿಂದ ಹಿಂಡಲಗಾ ಜೈಲು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು. ಆಕೆ ಮುಸ್ಲಿಮ್ ಮಹಿಳೆ ಸಮುದಾಯದ ವಿರೋಧದ ನಡುವೆ ಹಿಂದು ಹುಡುಗನ ಮದುವೆಯಾಗಿ ಜೀವನ ನಡೆಸುತ್ತಿದ್ದಳು. ಆಕೆಗೆ ಹೆಣ್ಣು ‌ಮಕ್ಕಳು ಹುಟ್ಟಿದವು ಎನ್ನುವ ಕಾರಣಕ್ಕೆ ಪತಿ ಮೊದಲ ಮಗಳ ಕೊಲೆ ಮಾಡಿ ಶಿಕ್ಷೆ ಅನುಭವಿಸುತ್ತಿರುವ ತಂದೆ ಈಗ ಹಿಂಡಲಗಾ ಕಾರಾಗೃಹದಲ್ಲಿದ್ದಾನೆ.

ಎರಡನೇ ಮಗಳ ಶಿಕ್ಷಣಕ್ಕಾಗಿ ಹಾಗೂ ಎಸ್ಐಆರ್ ದಾಖಲೆಗೆ ಗಂಡನ ಆಧಾರ ಕಾರ್ಡ್ ಬೇಕಿದ್ದು ಪತ್ನಿ ಗದಗನಿಂದ ಬೆಳಗಾವಿಗೆ ಬಂದು ಹಿಂಡಲಗಾ ಜೈಲಿನ ಅಧಿಕಾರಿಗಳು ಸಹಾಯ ಮಾಡದ ಹಿನ್ನೆಲೆಯಲ್ಲಿ ಬೀದಿ ಬೀದಿ ಅಲೇಯುತ್ತಿದ್ದಾಳೆ.

ಆಕೆಗೆ ಬೇಕಿರುವುದು ಗಂಡ ಅಲ್ಲ. ಆತನ ಆಧಾರ್ ಕಾರ್ಡ್. ಅದನ್ನು ಕೊಟ್ಟರೇ ಇದ್ದ ಮಗಳ ಜೀವನ ಉಜ್ವಲ್ ಆಗುತ್ತದೆ ಎನ್ನುವ ಭರವಸೆಯಲ್ಲಿ. ಸಂಬಂಧಿಸಿದ ಅಧಿಕಾರಿಗಳು ಆಕೆಯ ಅಪರಾಧಿ ಕೈದಿ ಗಂಡನ ಆಧಾರ್ ಕಾರ್ಡ್ ಕೊಡಿಸಿ ಪುಠಾಣಿ ಮಗಳಿಗೆ ಶಿಕ್ಷಣ ಕೊಡಿಸುವುದೇ ಆಡಳಿತ ಕಾದು ನೋಡಬೇಕಿದೆ.