ಬೆಳಗಾವಿ : ಬೆಳಗಾವಿ ಇನ್ ನ್ಯೂಸ್ ಸಂಪಾದಕ ರಾಜಶೇಖರ ಪಾಟೀಲ್ ಅವರ ತಾಯಿ ಶ್ರೀಮತಿ ಸುಶೀಲಾ ಪಾಟೀಲ್ ಅವರು ಭಾನುವಾರ ನಿಧನರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಬೆಳಗಾವಿಯ ಸದಾಶಿವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸುಶೀಲಾ ಪಾಟೀಲ ಅವರ ನಿಧನಕ್ಕೆ ಮಾಧ್ಯಮ, ಪತ್ರಿಕಾ, ರಾಜಕಾರಣಿಗಳು, ಸಮಾಜ ಸೇವಕರು ಹಾಗೂ ವಿವಿಧ ಸಂಘಟನೆಯ ಗಣ್ಯರು ಸಂತಾಪ ಸೂಚಿಸಿದ್ದಾರೆ.





