ರಾಯಬಾಗದಲ್ಲಿ ಕಳ್ಳಭಟ್ಟಿ ; ಪೊಲೀಸ್ ದಾಳಿಯಲ್ಲಿ ಜಪ್ತಿಯಾಗಿದ್ದು ಎಷ್ಟು..?
ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಕಳ್ಳಭಟ್ಟಿ ಸಂಘ್ರಹಿಸಿಟ್ಟಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿದ್ದು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯಲ್ಲಿ ಕಳ್ಳಭಟ್ಟಿ ಸರಾಯಿ ತಯಾರು ಮಾಡುವ ಕೊಳೆ 1790 ಲೀಟರ್ ಹಾಗೂ ಕಳ್ಳಭಟ್ಟಿ ಸರಾಯಿ 10 ಲೀಟರ್ ಸೇರಿದಂತೆ ಕಳ್ಳಭಟ್ಟಿ ತಯಾರು ಮಾಡಲು ಉಪಯೋಗಿಸುತ್ತಿದ್ದ ಬ್ಯಾರಲ್ ವಶಕ್ಕೆ ಪಡೆಯಲಾಗಿದೆ.
ಅಥಣಿ ವಲಯದ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಸಿಪಿಐ ರತನಕುಮಾರ ಜೀರಗ್ಯಾಳ, ಪಿಎಸ್ಐ ಪ್ರೀತಮ್ ನಾಯಿಕ,
ಕುಡಚಿ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಎಎಸ್ ಐ ಕೆ ಆರ್ ಸಾಳುಂಕೆ, ಪಿ.ಎಲ್ ಖವಟಿಕೊಪ್ಪ, ಎಚ್.ಎಸ್.ಗುಡ್ಡದ, ಬಿ.ಎಸ್.ಖೋತ, ಎ.ಎ.ಶಾಂಡಗೆ, ಎ.ಎಸ್.ಪಾಟೀಲ ಮತ್ತು ಮಹಿಳಾ ಸಿಬ್ಬಂದಿಯಾದ ಆರ್.ಎಸ್.ಸನದಿ ದಾಳಿ ನಡೆಸಿದ್ದಾರೆ.
ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


