ಬೆಳಗಾವಿ : ಬೈಲಹೊಂಗಲದಲ್ಲಿ ಸುರಿದ ಮಳೆಯಿಂದ ಪಟ್ಟಣದ ಕೆಲ ಗಲ್ಲಿಗಳಲ್ಲಿ‌ ನೀರು‌ ನುಗ್ಗಿದ ಹಿನ್ನೆಲೆಯಲ್ಲಿ ಚರಂಡಿ ಅವ್ಯವಸ್ಥೆ ವಿರುದ್ಧ ಯುವಕ ಈಶ್ವರ ಶಿಲೇದಾರ್ ಎಂಬಾತ ಮಳೆ‌ ನೀರಿನಲ್ಲಿ ಮೂರು ಗಂಟೆ ಪ್ರತಿಭಟನೆ ಮಾಡಿದ್ದಾನೆ.



ರಸ್ತೆ ಚರಂಡಿ ದುರಸ್ತಿ ‌ಮಾಡಿ‌ ಮಳೆ ನೀರು ಹರಿದು ಹೋಗಲು ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಮಳೆಗಾಲದ ಮೊದಲೇ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ, ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.



ನಗರಸಭೆ ವಿರುದ್ಧ ಸೋಮವಾರ ಸುರಿದ ಧಾರಾಕಾರ ಮಳೆ ವೇಳೆ ಸತತ ಮೂರು ಗಂಟೆಗಳ‌ ಕಾಲ ಹರಿಯುವ ನೀರಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.



ಸಧ್ಯ ಪ್ರತಿಭಟನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಯುವಕನ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.