ಬೆಳಗಾವಿ : ಸರ್ಕಾರಿ ನೌಕರರಿಗೆ ವಯೋಮಿತಿಯು ನಮ್ಮಂತಹ ರಾಜಕಾರಣಿಗಳಿಗೂ ಅನ್ವಯವಾಗಬೇಕು. ಇದರಿಂದ ಹೊಸ ಪೀಳಿಗೆಯು ರಾಜಕೀಯಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.

ಮೂಡಲಗಿ ತಾಲ್ಲೂಕಿನ ಪಟಗುಂದಿ ಗ್ರಾಮದಲ್ಲಿ ಶನಿವಾರ ನಡೆದ ಮೂಡಲಗಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.*
*ಶಿಕ್ಷಕರು ಸೇರಿ ಅನೇಕ ಇಲಾಖೆಗಳ ನೌಕರರು ತಮ್ಮ 60 ನೇ ವರ್ಷಕ್ಕೆ ಸೇವೆಯಿಂದ ನಿವೃತ್ತರಾಗುತ್ತಾರೆ. ಆದರೆ, ಈ ನಿವೃತ್ತ ನಮ್ಮಂತಹ ಚುನಾಯಿತ ಪ್ರತಿನಿಧಿಗಳಿಗೂ ಅನ್ವಯವಾಗಬೇಕು. ವಿಧಾನಸಭಾ, ಪರಿಷತ್ತು, ಮತ್ತು ಸಂಸತ್ತ ಸದನದ ಸದಸ್ಯರಿಗೂ ನಿವೃತ್ತಿಯ ಕುರಿತು ಆಂದೋಲನ ನಡೆಯಬೇಕಾಗಿದೆ. ಇದು ನಮ್ಮಿಂದಾನೇ ಆರಂಭವಾಗಲಿ ಎಂದು ಹೇಳಿದರು.

ನನಗೂ ಈಗ 60 ವರ್ಷ ವಯಸ್ಸು. ಮೊದಲಿನ ಹುಮ್ಮಸ್ಸು ಈಗ ಬರುತ್ತಿಲ್ಲ. ವಯಸ್ಸು ಏರುತ್ತಿದ್ದಂತೆಯೇ ಬಿಪಿ, ಸಕ್ಕರೆ ಕಾಯಿಲೆ ಬರಬಹುದು. ಮೊದಲಿನ ಆಹಾರ ಪದ್ಧತಿಯು ಈಗ ಉಳಿದಿಲ್ಲ. ಹೀಗಾಗಿಯೇ ಅನೇಕರಿಗೆ ಹೊಸ ಹೊಸ ಕಾಯಿಲೆಗಳು ಬರುತ್ತಿವೆ.

ಸರ್ಕಾರಿ ನೌಕರರಂತೆಯೇ ನಮ್ಮಂತಹ ಶಾಸನ ಸಭೆಯ ಸದಸ್ಯರಿಗೆ ವಯೋಮಿತಿಯನ್ನು ನಿಗದಿ ಮಾಡಬೇಕು. 80- 90 ವರ್ಷ ದಾಟಿದರೂ ಇನ್ನೂ ರಾಜಕಾರಣಿದಲ್ಲಿರುತ್ತಾರೆ. ನಾವೇ ಇದರಿಂದ ಹಿಂದೆ ಸರಿದು ಯುವಕರಿಗೆ ಅವಕಾಶವನ್ನು ಮಾಡಿಕೊಡಬೇಕು.‌

ನಮಗೂ ವಿಶ್ರಾಂತ ಜೀವನ ಬೇಕಾಗಿದೆ. ರಾಜಕಾರಣಿಗಳಿಗೂ ನಿವೃತ್ತಿಯ ವಯಸ್ಸನ್ನು ನಿಗದಿ ಮಾಡಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಗ್ರಹಿಸಿದರು.*