Select Page

ಶಿಕ್ಷಕಿಗೆ ಕಿರುಕುಳ ; ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು ; ಆರೋಪಿ ರಕ್ಷಣೆಗೆ ನಿಂತರಾ ಹಾರೂಗೇರಿ ಪೊಲೀಸರು..!

ಶಿಕ್ಷಕಿಗೆ ಕಿರುಕುಳ ; ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು ; ಆರೋಪಿ ರಕ್ಷಣೆಗೆ ನಿಂತರಾ ಹಾರೂಗೇರಿ ಪೊಲೀಸರು..!



ಹಾಗೂಗೇರಿ : ರಾಯಬಾಗ ತಾಲೂಕಿನ ಅಳಗವಾಡಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪತ್ರಕರ್ತನ ವಿರುದ್ಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಪತ್ರಕರ್ತ ಮಾರುತೆ ಹಳ್ಳೂರೆ ವಿರುದ್ಧ ಪ್ರಕರಣ ದಾಖಲಾಗಿದ್ದು ಹಾರೂಗೇರಿ ‌ಪೊಲೀಸರು ಬಂಧಿಸಿದ್ದಾರೆ. ಪ್ರೌಢಶಾಲೆ ಶಿಕ್ಷಕಿಗೆ ಮಾನಸಿಕ ಕಿರುಕುಳ ನೀಡದ್ದು 4 ಲಕ್ಷ ಹಣ ವಸೂಲಿ ಮಾಡಿದ್ದಾರೆ, ಅಷ್ಟೇ ಅಲ್ಲದೆ ಸುಳ್ಳು ಆರೋಪ ಹೊರಸಿ ಶಿಕ್ಷಕಿಯನ್ನು ಅಮಾನತು ಮಾಡಿಸುತ್ತೇನೆ ಎಂದು ಭಯ ಹುಟ್ಟಿಸಿದ್ದಲ್ಲದೆ ಮತ್ತೆ 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪ್ರಕರಣದಲ್ಲಿ ದಾಖಲಾಗಿದೆ.

ಪ್ರಕರಣಕ್ಕೆ ಹಿನ್ನಲೆ ಗಮನಿಸಿದರೆ ಪತ್ರಿಕೆ ಹಣದ ವಿಚಾರವಾಗಿ ವರದಿಗಾರ ಮಾರುತೆ ಹಳ್ಳೂರೆ ಶಿಕ್ಷಕಿ ಜೊತೆಗೆ ವಾಗ್ವಾದ ಮಾಡಿದ್ದಾನೆ. ಇದಾದ ನಂತರ ಶಾಲೆಯ ವಿಚಾರವಾಗಿ ಸುಳ್ಳು ಸುದ್ದಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಹಾರೂಗೇರಿ ‌ಮೂಲದ ಇಬ್ಬರು ಪತ್ರಕರ್ತರಿಂದಲೂ ಶಿಕ್ಷಕಿಗೆ ಬೆದಕಿಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿತ ಮಾರುತೆ ಹಳ್ಳೂರೆಯನ್ನು ಬಂಧಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

*******

ಆರೋಪಿ ರಕ್ಷಣೆಗೆ ನಿಂತರಾ ಹಾರೂಗೇರಿ ಪೊಲೀಸರು ‌

ಶಾಲಾ‌ ಶಿಕ್ಷಕಿಗೆ ಕಿರುಕುಳ ನೀಡಿದ ಪತ್ರಕರ್ತನ ರಕ್ಷಣೆಗೆ ಹಾರೂಗೇರಿ ಪೊಲೀಸರು ನಿಂತರಾ ಎಂಬ ಅನುಮಾನ ಮೂಡಿದೆ. ಪ್ರಕರಣ ಕುರಿತು ಮಾಹಿತಿ ಮುಚ್ಚಿಡುವ ಪ್ರಯತ್ನದಲ್ಲಿ ಪಿಎಸ್ಐ ತೊಡಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈ ಪ್ರಕರಣಕ್ಕೆ ಸಂಬಂಧ ಹಾರೂಗೇರಿ ಪಿಎಸ್ಐ ಅವರನ್ನು ಸಂಪರ್ಕ ‌ಮಾಡಿದರೂ ಮಾಹಿತಿ ನೀಡದಿರುವುದು ವಿಪರ್ಯಾಸವೇ ಸರಿ.

************

Advertisement

Leave a reply

Your email address will not be published. Required fields are marked *

error: Content is protected !!