ಬೆಳಗಾವಿ : ಸಮುದಾಯದ ಮಹಿಳೆಯರ ಆರ್ಥಿಕ ಹಾಗೂ ಸಮಾಜಿಕ ಭದ್ರತೆಗಾಗಿ ನಿರಂತರ ಸಮಾಜ ಸೇವೆ ಸಲ್ಲಿಸುತ್ತಿರುವ ಶ್ರೀ ಸಾಯಿ ಶ್ರದ್ಧಾ ಮಹಿಳಾ ಕಲ್ಯಾಣ ಸಮಿತಿ ಸಂಸ್ಥಾಪಕಿ  ಸವಿತಾ ಹೆಬ್ಬಾರ್ ಅವರಿಗೆ ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಐಕಾನ್ಸ್ ಆಫ್ ಇಂಡಿಯನ್ ಬಿಸಿನೆಸ್ ಮ್ಯಾಗಜಿನ್ ವತಿಯಿಂದ ಕೊಡಮಾಡುವ 2026 ನೇ ಸಾಲಿನ ನಾರಿ ಶಕ್ತಿ ಪುರಸ್ಕಾರವನ್ನು ಸವಿತಾ ಅವರಿಗೆ ನೀಡಲಾಯಿತು. ಮಾರ್ಚ್ 15 ರಂದು ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ನೀಡಿದರು.‌

ಕಳೆದ ಹತ್ತಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸವಿತಾ ಹೆಬ್ಬಾರ್ ಅವರು ತಮ್ಮದೇ ಸ್ವಯಂ ಸೇವಾ ಸಂಸ್ಥೆ ಕಟ್ಟಿಕೊಂಡು ಮಹಿಳಾ‌ ಸಬಲೀಕರಣಕ್ಕಾಗಿ ದುಡಿಯುತ್ತಿದ್ದಾರೆ. ಇವರ ಮಹತ್ವದ ಕಾರ್ಯದಿಂದ ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸವಿತಾ ಹೆಬ್ಬಾರ್ ಅವರ ಸಾಮಾಜಿ ಕಳಕಳಿ ಗುರುತಿಸಿ ಸಂಸ್ಥೆ ಪ್ರಶಸ್ತಿ ನೀಡಿದ್ದು ಇವರ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.