Select Page

Advertisement

ಬೆಳಗಾವಿ : ಎರಡು ದಿನದಲ್ಲಿ 7 ಜನ ಸಾವು, ಮೃತ್ಯುಕೂಪ ವಾದ ರಸ್ತೆಗಳು….!

ಬೆಳಗಾವಿ : ಎರಡು ದಿನದಲ್ಲಿ 7 ಜನ ಸಾವು, ಮೃತ್ಯುಕೂಪ ವಾದ ರಸ್ತೆಗಳು….!



ಬೆಳಗಾವಿ : ಬೆಳಗಾವಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಬರೋಬ್ಬರಿ ಏಳು ಜನ ಸಾವಿಗೀಡಾಗಿದ್ದಾರೆ.

ಹೌದು ಸೋಮವಾರ ರಾಯಬಾಗ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬನಹಟ್ಟಿ ಮೂಲದ ಆನಂದ ಪೂಜಾರಿ(23) ಮೃತಪಟ್ಟಿದ್ದಾರೆ.

ಹಾಗೆಯೇ ಇದೇ ದಿನ ಕಟಕೋಳ – ಮನವಳ್ಳಿ ಬಳಿ‌ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸವದತ್ತಿ ತಾಲೂಕಿನ ಇಂಚಲದ ಶಿವು ಜಕ್ಕಪ್ಪನ್ನವರ (22) ಮೃತಪಟ್ಟಿದ್ದಾನೆ.

ಕಟಕೋಳ – ಯರಗಟ್ಟಿ ರಸ್ತೆಯಲ್ಲಿ ಕಾರು ಅಪಘಾತದಲ್ಲಿ ‌ರಾಮದುರ್ಗ‌ ಪಟ್ಟಣದ ನಿವಾಸಿ ವಿಶ್ವನಾಥ ರಾಮದುರ್ಗ (24) ಮೃತಪಟ್ಟಿದ್ದಾರೆ.

ರಾಮನಗರ ಕಡೆಯಿಂದ ಜೋಯಿಡಾ ಕಡೆಗೆ ತೆರಳುವ ವೇಳೆ ಬೈಕ್ ಅಪಘಾತ ಸಂಭವಿಸಿದ್ದು ಈ ಸಂದರ್ಭದಲ್ಲಿ ದಿಗಂಬರ ಗಾವರೆ (27)ಮೃತಪಟ್ಟಿದ್ದಾನೆ.

ನಿಪ್ಪಾಣಿ ತಾಲೂಕಿನ ಕಸನಾಳ – ಬೋರಗಾಂವ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಳಾಸೋ ಮುದಾಳೆ (30) ಮಂಗಳವಾರ ಮೃತಪಟ್ಟಿದ್ದಾನೆ.

ರಾಮದುರ್ಗ ಕಡೆಯಿಂದ ತಿಮ್ಮಾಪೂರ ಕಡೆಗೆ ಬರುವ ವೇಳೆ ಮಂಗ ಅಡ್ಡ ಬಂದ ಪರಿಣಾಮ ಬೈಕ ಅಪಘಾತ ಸಂಭವಿಸಿದ್ದು ತಿಮ್ಮಾಪುರ ಗ್ರಾಮದ ಮರಿಯಪ್ಪ ಮಾದರ (48) ಮೃತಪಟ್ಟಿದ್ದಾರೆ.

ರಸ್ತೆ ಪಕ್ಕ ‌ನಿಂತಿದ್ದ ಟ್ಯಾಂಕರ್ ಗೆ ಬೈಕ್ ಅಪಘಾತಪಡಿಸಿ ಎಂ.ಕೆ ಹುಬ್ಬಳ್ಳಿ ಮೂಲದ ಶಂಕರೆಪ್ಪ‌ ಬಡಿಗೇರ ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳಲ್ಲಿ ಏಳು ಸಾವು ದಾಖಲಾಗಿದ್ದು ಇದರಲ್ಲಿ ಬೆಳಗಾವಿ ನಗರ ಹೊರತುಪಡಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!